Posts Slider

Karnataka Voice

Latest Kannada News

ಮಂಜುನಾಥ ಬದ್ದಿ ನೀಡಿದ ದೂರಿಗೆ ಅಂದರ್ ಆದ Rtd. RFO-ಗುತ್ತಿಗೆದಾರರು…!

1 min read
Spread the love

ಹುಬ್ಬಳ್ಳಿ: ನಗರದ ಮಂಜುನಾಥ ಬದ್ದಿ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಅರಣ್ಯ ವಲಯದಲ್ಲಿ ಅವ್ಯವಹಾರ ನಡೆದ ಬಗ್ಗೆ ಸಾಬೀತಾದ ಹಿನ್ನೆಲೆಯಲ್ಲಿ ನಿವೃತ್ತ ಆರ್ ಎಫ್ ಓ ಮತ್ತು ಇಬ್ಬರು ಗುತ್ತಿಗೆದಾರರನ್ನ ಬಂಧನ ಮಾಡಿರುವ ಎಸಿಬಿ ಅಧಿಕಾರಿಗಳು, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

2014-15 ಮತ್ತು 2015-16ರಲ್ಲಿ ಹುಬ್ಬಳ್ಳಿ ಅರಣ್ಯ ವಲಯದಲ್ಲಿ ಹಸರೀಕರಣದ ಯೋಜನೆಯಡಿಯಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ಮಂಜುನಾಥ ಬದ್ದಿ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 1ಕೋಟಿ 20 ಲಕ್ಷ ರೂಪಾಯಿ ಹಣದ ದುರುಪಯೋಗವಾಗಿರುವ ಬಗ್ಗೆ ಸಾಕ್ಷ್ಯಗಳನ್ನ ಕ್ರೋಡಿಕರಿಸಿ, ಮೂವರನ್ನ ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತರನ್ನ ನಿವೃತ್ತ ಆರ್ ಎಫ್ ಓ ಸಿ.ಎಚ್.ಮಾವಿನತೋಪು, ಗುತ್ತಿಗೆದಾರರಾದ ದತ್ತಾತ್ರೇಯ ಪಾಟೀಲ ಹಾಗೂ ವಿನಾಯಕ ಪಾಟೀಲ ಎಂದು ಗುರುತಿಸಲಾಗಿದ್ದು, ಕಾರ್ಯಾಚರಣೆಯು ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಎಲ್.ವೇಣುಗೋಪಾಲ ಹಾಗೂ ತನಿಖಾ ಸಹಾಯಕ ಶಿವಾನಂದ ಕೆಲವಡಿ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದ್ದರು.


Spread the love

Leave a Reply

Your email address will not be published. Required fields are marked *

You may have missed