“RSS” ಇರದಿದ್ದರೇ ಭಾರತ ನಾಲ್ಕೈದು ಪಾಕಿಸ್ತಾನವಾಗ್ತಿತ್ತು: ಬಿಜೆಪಿಯ ಮಾಜಿ ಸಿಎಂ ಹೇಳಿಕೆ..
1 min readಹುಬ್ಬಳ್ಳಿ: ಅಕಸ್ಮಾತ್ RSS ಇರದಿದ್ರೆ, ಭಾರತ 4-5 ಪಾಕಿಸ್ತಾನ ಆಗುತ್ತಿತ್ತು. ದೇಶವನ್ನ ಸರಿಯಾದ ಮಾರ್ಗದರ್ಶನದಲ್ಲಿ ತೆಗೆದುಕೊಂಡು ಹೋಗುವುದರಲ್ಲಿ RSSನ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸ್ಪರ್ಧೆಗೆ ಬಿದ್ದವರ ರೀತಿಯಲ್ಲಿ RSS ಮೇಲೆ ಟೀಕೆ ಮಾಡುತ್ತಿದ್ದಾರೆ. RSS ಸಂಘಟನೆಯನ್ನ ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. 100 ವರ್ಷದ ಸಂಸ್ಥೆ ಅದು, ದೇಶ ಸುರಕ್ಷಿತವಾಗಿದೆ ಅಂದ್ರೆ ಅದಕ್ಕೆ RSS ಕಾರಣ ಎಂದರು.
ದೇಶದ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಹೋಗುವ ಕಾರ್ಯ RSS ಮಾಡುತ್ತಿದೆ. ಅಕಸ್ಮಾತ್ RSS ಇರದಿದ್ರೆ ಭಾರತ 4-5 ಪಾಕಿಸ್ತಾನ ಆಗುತ್ತಿತ್ತು. ದೇಶದಲ್ಲಿ ಸೌಹಾರ್ದವನ್ನು ಕಾಪಾಡಿಕೊಂಡು ಹೋಗುವಲ್ಲಿ RSS ಪ್ರಮುಖ ಪಾತ್ರ ವಹಿಸಿದೆ. ಕುಮಾರಸ್ವಾಮಿ ಹೇಳಿದಂತೆ ಹಿಂದಿನ ಸಂಘ ಬೇರೆ ಈಗೀಗ ಸಂಘ ಬೇರೆ ಅಂತಾರೆ. ಹಿಂದಿನ ಜೆಡಿಎಸ್, ಹಿಂದಿನ ಜನತಾದಳ, ಹಿಂದಿನ ಕಾಂಗ್ರೆಸ್ ಅಂದ್ರೆ ನಂಬಬಹುದು. ಆದ್ರೆ RSS ಯಾವಾಗಲೂ RSS, ಎಂದಿಗೂ ಅದು ಬದಲಾಗುವುದಿಲ್ಲ ಎಂದು ಶೆಟ್ಟರ್ ಟಾಂಗ್ ನೀಡಿದರು.
RSS ಮೂಲತತ್ವ, ವಿಚಾರಗಳು ಎಂದೂ ಬದಲಾಗುವುದಿಲ್ಲ. ಸಂಘ ಸ್ಥಾಪನೆಯದಾಗಿನಿಂದ ಒಂದೇ ವಿಚಾರ, ದೇಶ ಮೊದಲು ಉಳಿದಿದ್ದೆಲ್ಲ ನಂತರ ಎನ್ನುವ ತತ್ವದಲ್ಲಿದೆ. ಕುಮಾರಸ್ವಾಮಿ, ಸಿದ್ದರಾಯಯ್ಯ, ಕಾಂಗ್ರೆಸ್, ಜನತಾ ಪರಿವಾರ ಬದಲಾದ್ರೂ ಸಂಘ ಬದಲಾಗಿಲ್ಲ. ಅಲ್ಪಸಂಖ್ಯಾತರ ಓಲೈಕೆಗಾಗಿ ಹೆಚ್ಡಿಕೆ, ಸಿದ್ದರಾಮಯ್ಯ ಪೈಪೋಟಿ ಗೆ ಇಳಿದಿದ್ದಾರೆ. ಅವರ ಓಲೈಕೆ ಒಂದೇ ಉದ್ದೇಶಕ್ಕಾಗಿ RSS ನ್ನ ಯಾಕೆ ಬೈಯ್ಯುತ್ತಿರಿ..?. RSS ಸಂಘಟನೆ ಯಾಕೆ ಟಾರ್ಗೆಟ್ ಮಾಡ್ತೀರಿ, ದೇಶಕ್ಕೆನಾದರೂ ಅನ್ಯಾಯ ಮಾಡಿದ್ದಾರೆ. ನಿಮ್ಮ ರಾಜಕಾರಣದ ತೆವಲಿಗಾಗಿ RSS ಬೈಯೋದು ಸೂಕ್ತವಲ್ಲ. ಇದರಿಂದ ನಿಮಗೆ ಧಕ್ಕೆಯಾಗಲಿದೆ ಎಂದು ಶೆಟ್ಟರ್ ಕಿಡಿಕಾರಿದರು.
ಹುಬ್ಬಳ್ಳಿ – ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿ ವಿಚಾರ
ಕಾನೂನು ತನ್ನ ಕೆಲಸ ತಾನು ಮಾಡುತ್ತದೆ. ಕಾನೂನು ರೀತಿ ಏನಾಗಬೇಕೋ ಅದು ಆಗುತ್ತದೆ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಸ್ವತಃ ಯಡಿಯೂರಪ್ಪನವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ನಾವೇ ಗೆಲ್ತೇವೆ
ಹಾನಗಲ್ ನಲ್ಲಿ ಸಿಎಂ ಉದಾಸಿ ಅವರ ಕುಟುಂಬದ ಸದಸ್ಯರನ್ನೇ ಚುನಾವಣೆಗೆ ನಿಲ್ಲಿಸುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದರೆ, ಪಕ್ಷದ ನಿರ್ಧಾರ ಬೇರೆಯೇ ಆಗಿದೆ. ಅಭ್ಯರ್ಥಿ ಬದಲಾಗಿದ್ದರೂ ಮತದಾರರು ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸುತ್ತಾರೆ.