“ಸಭ್ಯತೆ, ಸಂಸ್ಕೃತಿ” ಬಗ್ಗೆ ಮಾತಾಡೋರು ‘ROYAL RITZ’ಗೆ ಶನಿವಾರ ರಾತ್ರಿ ಭೇಟಿ ಕೊಡ್ತೀರಾ…!?

ಹುಬ್ಬಳ್ಳಿ: ದೇಶದ ಸಂಸ್ಕೃತಿಯ ಬಗ್ಗೆ ಇವತ್ತಿನ ಪೀಳಿಗೆ ಯಾವ ಮನೋಭಾವನೆ ಹೊಂದುತ್ತಿದೆ ಎಂಬುದನ್ನ ಸಾಕ್ಷಿ ಸಮೇತ ನೋಡುವ ಬಯಕೆಯಿದ್ದವರು ಒಂದ್ಸಲ ನವನಗರದ ಅಮರಗೋಳ ಗ್ರಾಮಕ್ಕೆ ಅಂಟಿಕೊಂಡಿರುವ ಐಷಾರಾಮಿ ಹೊಟೇಲ್‌ಗೆ ಭೇಟಿ ನೀಡಬಹುದಾಗಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ.
ವೀಡಿಯೋ…
ರಾಯಲ್ ರಿಡ್ಜ್ ಹೆಸರಿನ ಈ ಹೊಟೇಲ್‌ನಲ್ಲಿ ಪ್ರತಿ ಶನಿವಾರ ಸಂಸ್ಕೃತಿಯ ಅನಾವರಣ ಆಗುತ್ತಿರತ್ತೆ. ದಿನಬೆಳಗಾದರೇ, ರಸ್ತೆಯಲ್ಲಿ ನಿಂತು ಉದ್ದುದ್ದ ಭಾಷಣ ಬೀಗಿಯುವ ಹಲವರು, ಇದಕ್ಕೊಂದು ತಾರ್ಕಿಕ ಅಂತ್ಯ ಕೊಡಲು ಮುಂದಾಗಬೇಕೆಂಬ ಮಾತುಗಳು ಬರುತ್ತಿವೆ.
ಹದಿಹರೆಯದ ಯುವಕ-ಯುವತಿಯರು ದೇಶದ ಸಭ್ಯತೆಯನ್ನ ಮರೆತು ಅವರದ್ದೆ ಆದ ಶೈಲಿಯಲ್ಲಿ ‘ಅವರವರಲ್ಲೇ’ ಕೈ ಕೈ ಹಿಡಿದು ಒಂದಾಗೋಣ ಬಾ ಅಂತಿರ್ತಾರೆ.
ಕನ್ನಡದ ಲವಲೇಷವೂ ಇಲ್ಲಿ ಕೇಳಲೂ ಸಿಗಲ್ಲ. ದೇಶದ ಯುವ ಪೀಳಿಗೆಯ ಉನ್ಮಾದತೆ ಎಲ್ಲಿಗೆ ಬರತೊಡಗಿದೆ ಎಂಬ ಆತಂಕ ಪ್ರಜ್ಞಾವಂತರಿಗೆ ಕಾಡತೊಡಗಿದೆ. ಆದರೂ, ಪೊಲೀಸರು ಬಂದರೂ ಮತ್ತೂ ಹೋದರೂ… ಸಂಸ್ಕೃತಿಗಳ ಸಮಾಗಮ… ದೇವರೇ ಕಾಪಾಡಬೇಕು.