ಕೊಲೆ, ಸುಲಿಗೆ ಮಾಡಿದ್ದ ರೌಡಿಷೀಟರ್‌ಗೆ ಬಿತ್ತು ಪೊಲೀಸ್ ಗುಂಡೇಟು…!!!

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ವೇಳೆಯಲ್ಲಿ ಪೊಲೀಸ್ ಫೈರಿಂಗ್
ಕೋಲಾರ: ರೌಡಿಷೀಟರ್‌ನನ್ನ ಬಂಧನ ಮಾಡುವ ವೇಳೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಮಯದಲ್ಲಿ ಪೊಲೀಸರು ರೌಡಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಅಂಡರ್‌ಸನ್ ಪೇಟೆಯಲ್ಲಿ ಸಂಭವಿಸಿದೆ.
ವೀಡಿಯೋ ಇಲ್ಲಿದೆ ನೋಡಿ…
ಕೊಲೆ, ಸುಲಿಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಷೀಟರ್ ಸ್ಟಾಲಿನ್, ಬಂಧಿಸುವ ವೇಳೆ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದಾಗ, ಪೊಲೀಸರು ರೌಡಿಷೀಟರ್ ಬಲ ಕಾಲಿಗೆ ಗುಂಡು ಹೊಡೆಯಲಾಗಿದೆ.
ಘಟನೆಯಲ್ಲಿ ಪೊಲೀಸ್ ಪೇದೆ ಸುನಿಲ್ ಎಂಬುವವರಿಗೆ ಗಾಯವಾಗಿದ್ದು, ಅಂಡರ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.