“ಗಡಿಪಾರು” ಆದರೂ ಹುಬ್ಬಳ್ಳಿಯಲ್ಲೇ ಮುಂದುವರೆದ “ರೌಡಿಸಂ”- Exclusuve Videos

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಗಡಿಪಾರು ಮಾಡಿದ್ದ ರೌಡಿಯೋರ್ವ ಸ್ಥಳವಾಗಿಯೇ ಇರುವುದು ಮತ್ತೂ ರೌಡಿಸಂ ಮಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಹುಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಕಳೆದ ಕೆಲ ದಿನಗಳ ಹಿಂದೆ 40 ಕ್ಕೂ ಜನ ರೌಡಿ ಶೀಟರ್‌ಗಳನ್ನ ಗಡಿಪಾರು ಮಾಡಿದ್ರು. ಆದರೂ ಹುಬ್ಬಳ್ಳಿಯಲ್ಲಿರೋ ರೌಡಿ ಶೀಟರ್ ವಿಜಯಕುಮಾರ್ ಆಲೂರ, ತನ್ನ ಉಪಟಳವನ್ನ ಮುಂದುವರೆಸಿದ್ದಾನೆ.
ಕೇರ್ಂ ಆಡೋವಾಗ ಚೇರ್ ಗಳನ್ನ ಎತ್ತಿ ಒಗೆದು ದರ್ಪವನ್ನ ಗಿರಣಿ ಚಾಳದ ಸಮದಾಯ ಭವನದಲ್ಲಿ ರೌಡಿ ಶೀಟರ್ ವಿಜಯಕುಮಾರ್ ಮೆರೆದಿದ್ದಾನೆ.
ನಿನ್ನೆ ಸಂಜೆ ವಿಜಯಕುಮಾರ್ ದರ್ಪ ತೋರಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಮುಂದೇನು ಮಾಡುತ್ತಾರೆ ಎಂಬುದೀಗ ಯಕ್ಷಪ್ರಶ್ನೆಯಾಗಿದೆ.