ಮತ್ತ್ ಬಂದ್ ಆಗೇತೀ: ಸವದತ್ತಿ ರೋಡಿಗೆ ಹೋಗಬ್ಯಾಡ್ರೀ..

ಧಾರವಾಡ: ಕಳೆದ ರಾತ್ರಿ ಸುರಿದ ಮಳೆಯಿಂದ ಧಾರವಾಡ ಸವದತ್ತಿ ರಸ್ತೆ ಮತ್ತೆ ಬಂದಾಗಿದ್ದು, ಬಸ್ ಹಾಗೂ ಇನ್ನುಳಿದ ಪ್ರಯಾಣಿಕರು ಪರದಾಡುವಂತಾಗಿದೆ.
ಕಳೆದ ಬಾರಿಯ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಾರೋಬೆಳವಡಿ ಸೇತುವೆಯ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.
ತುಪರಿಹಳ್ಳ ತುಂಬಿ ಹರಿಯುತ್ತಿರುವುದರಿಂದ ಹಾರೋಬೆಳವಡಿ ಮತ್ತು ಇನಾಂಹೊಂಗಲದ ನಡುವಿನ ರಸ್ತೆ ಬಂದ್ ಆಗಿದೆ. ಸವದತ್ತಿಗೆ ಧಾರವಾಡದ ಮೂಲಕ ಹೋಗಬೇಕಾದವರು ಬೇರೆಯ ಮಾರ್ಗವನ್ನ ಕಂಡುಕೊಳ್ಳುವುದು ಒಳ್ಳೆಯದು.