ಆ ರಸ್ತೆಗೇ ಹೋಗಬ್ಯಾಡ್ರೇಪೋ ಅಣ್ಣಾಗುಳ್.. ಉಧೋ.. ಉಧೋ.. ಯಲ್ಲಮ್ಮ ನಿನ್…
ಧಾರವಾಡ: ವಿದ್ಯಾನಗರಿ ಧಾರವಾಡದಿಂದ ಸವದತ್ತಿ ಹೋಗೋ ರಸ್ತೆ ಒಂದು ರೀತಿಯಲ್ಲಿ ಆಡೂನ್ ಬಾ ಕೆಡಸೂನ್ ಬಾ ಎನ್ನುವಂತಾಡುತ್ತಿದೆ. ಒಂದ್ ದಿನಾ ಚಲೂವ್ ಆಗೂದ್, ಮತ್ತೊಂದ್ ದಿನಾ ಬಂದ್ ಆಗೂದು. ಹೀಂಗ ಆದ್ರೂ, ಯಾರೂ ಏನೂ ಮಾಡವಲ್ರ. ಜನಾ ಹೋಗೋಗಿ ಸಿಕ್ಕುಳುವಂಗ ಆಗೇತಿ..
ಹೌದು.. ಇವತ್ತು ಮತ್ತೆ ಹಾರೋಬೆಳವಡಿ ಬಳಿ ರಸ್ತೆ ಸಂಚಾರ ಬಂದಾಗಿದೆ. ರಾತ್ರಿ ಸುರಿದ ಮಳೆಯಿಂದ ನೀರು ಹರಿಯುತ್ತಿದ್ದಾಗಲೇ ಲಾರಿಯೊಂದು ಬಂದು ಅಲ್ಲೇ ಸಿಕ್ಕಿಕೊಂಡಿದೆ. ಇದರಿಂದ ಮತ್ತಷ್ಟು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ಹಾರೋಬೆಳವಡಿ ಬಳಿಯ ಸೇತುವೆ ಕಳೆದ ಬಾರಿಯೇ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿತ್ತಾದರೂ, ಕಾಮಗಾರಿ ವಿಳಂಬ ಆಗುತ್ತಿರುವುದು ಇಷ್ಟೇಲ್ಲ ರಾದ್ಧಾಂತವಾಗುತ್ತಿದೆ. ವಾರಕ್ಕೋಮ್ಮೆಯಾದರೂ ಈ ರಸ್ತೆ ಬಂದ್ ಆಗುತ್ತಿದೆ. ಹೀಗಾಗಿ ಪ್ರಯಾಣಿಕರು ನಂಬಿಕೆಯಿಂದ ರಸ್ತೆಗೆ ಹೋಗದಂತಾಗಿದೆ.
ಧಾರವಾಡ ಮೂಲಕ ಸವದತ್ತಿ ಮೂಲಕ ಯಲ್ಲಮ್ಮನ ಗುಡ್ಡಕ್ಕೆ ತೆರಳುವವರು ಕೂಡ ಕಷ್ಟವನ್ನ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗನೇ ಈ ಕಾಮಗಾರಿಗೆ ಚುರುಕು ಮುಟ್ಟಿಸಬೇಕಿದೆ. ಇಲ್ಲದಿದ್ದರೇ ಜನರ ಪರದಾಟ ನಿರಂತರವಾಗಿರಲಿದೆ.