ಮನುಜ ಪ್ರೇಮಿ ಪ್ರೀತಿಯ ರಾಮಚಂದ್ರ ಕುಲಕರ್ಣಿ @ ಆರ್ ಕೆ: ನಿನ್ನಂತವರು ಇಮ್ಮಡಿಸಲಿ
ಧಾರವಾಡ: ಅದ್ಯಾವುದೋ ಮೂಲೆಯಲ್ಲಿ ವಯೋವೃದ್ಧ ತಲೆಗೊಂದು ಪೇಟ್ ಸುತ್ತಿಕೊಂಡು ಮಾಸ್ಕಿಲ್ಲದೇ ಕೂತಿದ್ದನ್ನ ನೋಡಿದ ತಕ್ಷಣವೇ ಈತ ತನ್ನ ಬಳಿಯಿದ್ದ ಹೊಸದೊಂದು ಮಾಸ್ಕ್ ತೆಗೆದುಕೊಂಡು ಹೋಗಿ, ಆತನಿಗೆ ಆರೋಗ್ಯ ಸಿಗಲಿ ಎಂದು ಬಯಸುತ್ತಾನೆ. ಆತ ಭಿಕ್ಷುಕನಂತಾಗಲಿ.. ಆತನ ಬಳಿ ಹೋಗದೇ ಇರುವುದೇ ವಾಸಿ ಎನ್ನುವುದಾಗಲಿ ಮಾಡದೇ ಇರುವುದೇ ಈತನ ಕಾಯಕ..
ಪ್ರತಿದಿನವೂ ರಸ್ತೆಗುಂಟ ಅಲೆಯುವುದು ಈತನ ಕರ್ತವ್ಯ. ಯಾಕಂದ್ರೇ ಪತ್ರಿಕೆಯೊಂದರ ಛಾಯಾಗ್ರಾಹಕ.. ಹೆಸರು ರಾಮಚಂದ್ರ ಕುಲಕರ್ಣಿಯಾದರೂ ಎಲ್ಲರೂ ಪ್ರೀತಿಯಿಂದ ಕರೆಯೋದು ಆರ್ ಕೆ ಅಂತಲೇ.
ತನ್ನ ಅನುಭವದಷ್ಟೇ ವಯಸ್ಸಿನ ಹುಡುಗರು ಮಾಧ್ಯಮಲೋಕಕ್ಕೆ ಬಂದರೂ, ತನಗೇನು ಗೊತ್ತೆಯಿಲ್ಲವೇನೋ ಅನ್ನುವಂತೆ ನಡೆದುಕೊಳ್ಳುವ ಆರ್ ಕೆ ಕಂಡರೇ ಎಲ್ಲರಿಗೂ ಆದರ, ಆತ್ಮೀಯತೆ.
ಅದಕ್ಕೆ ಕಾರಣಗಳೂ ಹಲವು, ಸದಾಕಾಲ ಕಣ್ಣೀಗೆ ಕಾಣುವ ನೋವುಗಳನ್ನ ತನ್ನ ವ್ಯಾಪ್ತಿಯಲ್ಲಿ ಕಡಿಮೆ ಮಾಡುವ ಪ್ರಯತ್ನ ಮಾಡ್ತಾನೆ. ‘ಅಣ್ಣಾ, ಅಲ್ಲಿ ಸ್ವಲ್ಪ ನೋಡ್. ನೀ ಸುದ್ದಿ ಮಾಡಿದ್ರ್ ಹೆಲ್ಪ್ ಆಗತ್ತ್’ ಎನ್ನುತ್ತಲೇ ಬಡವರ ಬದುಕಿಗೆ ಆಸರೆಯಾಗುತ್ತಾನೆ.
ಆರ್ ಕೆ ಯಂತವರ ಸಂಖ್ಯೆ ಹೆಚ್ಚಾಗಲಿ. ರಾಮಚಂದ್ರ ಕುಲಕರ್ಣಿ ಅಲಿಯಾಸ್ ಆರ್ ಕೆ ಇನ್ನಷ್ಟು ಆರೋಗ್ಯವಾಗಿ ಜೀವನವನ್ನ ಇನ್ನಷ್ಟು ಮಾನವೀಯತೆಯಲ್ಲಿ ಬದುಕುವಂತಾಗಲಿ ಎಂದು ನಾವೂ ನೀವೂ ಹಾರೈಸೋಣನಲ್ಲವೇ..