ನಿಸ್ವಾರ್ಥ ಸೇವೆಯಲ್ಲಿ ಧಾರವಾಡದ “ಅಪರೂಪದ ನಿವೃತ್ತ ಶಿಕ್ಷಕರು”- ಸ್ವಾತಂತ್ರ್ಯೋತ್ಸವದ ವಿಶೇಷ….

ಸ್ವಾತಂತ್ರ್ಯದ ಮೂಲ ಮಂತ್ರ ಪಠಿಸುವ ಕಾರ್ಯ
ಜನಪ್ರತಿನಿಧಿ, ಅಧಿಕಾರಿಗಳಿಗೆ ಕೆಲಸದಿಂದಲೇ ಗುದ್ದು
ಧಾರವಾಡ: ದೇಶ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದಾಗಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಷ್ಟೊಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದನ್ನ ತೋರಿಸುವ ಜೊತೆಗೆ ಸ್ವಾತಂತ್ರ್ಯದ ನಿಜ ಅರ್ಥವನ್ನ ತಿಳಿಸುವ ವರದಿಯಿದು.
ಸರಕಾರದ ಕೆಲಸ ದೇವರ ಕೆಲಸವೆಂದು ನೌಕರಿ ಪಡೆಯುವ ಮತ್ತೂ ಜನಪ್ರತಿನಿಧಿಗಳಾಗುವ ಮಹಾನ್ (?) ನಾಯಕರು ತಾವೂ ನೀಡುವ ಹೇಳಿಕೆಗಳು ಮತ್ತು ಭರವಸೆಗಳು ಯಾವುದರಲ್ಲಿ ಬಿದ್ದು ಹೋಗಿರುತ್ತವೆ ಎಂಬುದನ್ನ ಕಾಣುವುದಿಲ್ಲ. ಹಾಗಾಗಿಯೇ ನಿವೃತ್ತ ಶಿಕ್ಷಕರಿಬ್ಬರು, ಇಂತಹ ವ್ಯವಸ್ಥೆ ವಿರುದ್ಧ ಏನೂ ಮಾಡಲಾಗದೇ ತಾವೇ ಸರಕಾರ ಮಾಡಬೇಕಾದ ಕೆಲಸ ಮಾಡಲು ಆರಂಭಿಸಿದ್ದಾರೆ.
ವರದಿಯ ವೀಡಿಯೋ…
ಈ ಕೆಲಗೇರಿ ಕೆರೆಯ ದಂಡೆಯನ್ನ ಪೋಟೋ ಪೋಸ್ ಕೊಡುವ ರಾಜಕಾರಣಿಗಳೂ ವಾಕಿಂಗ್ ಮಾಡಲು ಬಳಸುತ್ತಾರೆ. ಕ್ಲಿನಿಂಗ್ ಇಡೋ ಪ್ರಯತ್ನ ಮಾಡಲ್ಲ. ಇಂತಹ ಮಹಾನ್ (?) ನಾಯಕರು ಈ ಶಿಕ್ಷಕರ ಜೊತೆಗೆ ಕಸ ಕೀಳಲಾದರೂ ಮುಂದಾಗಬೇಕು ಅನ್ನೋದು ಪ್ರಜ್ಞಾವಂತರ ಬಯಕೆಯಾಗಿದೆ.