ನಿವೃತ್ತ ಡಿವೈಎಸ್ಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು: ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಡಿವೈಎಸ್ಪಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದ ಎಂ.ಸಿ ಲೇಔಟ್ ಸಂಭವಿಸಿದೆ.
ಹನುಮಂತಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನಿವೃತ್ತ ಡಿವೈಎಸ್ಪಿಯಾಗಿದ್ದು, ಮಾಗಡಿರಸ್ತೆ, ಬ್ಯಾಟರಾಯನಪುರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ವಿಜಯನಗರ ಉಪವಿಭಾಗದಲ್ಲಿ ಎಸಿಪಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹನುಮಂತಪ್ಪನವರು ನಾಳೆಯಿಂದ ಕೀಮೋಥೇರಫಿ ಚಿಕಿತ್ಸೆಗೆ ಒಳಪಡಬೇಕಿತ್ತು. ಇದೇ ಕಾರಣಕ್ಕೆ ನಿವೃತ್ತ ಡಿವೈಎಸ್ಪಿ ಖಿನ್ನತೆಗೆ ಒಳಗಾಗಿದ್ದರೆಂದು ಹೇಳಲಾಗಿದೆ.
ನೇಣು ಬಿಗಿದುಕೊಂಡಿರುವ ಪ್ರಕರಣವನ್ನ ವಿಜಯನಗರ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮವನ್ನ ಕೈಗೊಂಡಿದ್ದಾರೆ.