ನಿವೃತ್ತ ACP ಆರ್.ಕೆ.ಪಾಟೀಲ ಅನಾರೋಗ್ಯದಿಂದ ನಿಧನ…
ಹುಬ್ಬಳ್ಳಿ: ಕಮೀಷನರೇಟ್ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಆರ್.ಕೆ.ಪಾಟೀಲ ಅವರು ಅನಾರೋಗ್ಯದಿಂದ ತಮ್ಮ ಹುಟ್ಟೂರಲ್ಲಿ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ರಾಯಭಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ನಿಧನರಾಗಿದ್ದು, ಇಂದು ಅದೇ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಬಂದಿದೆ.

ಎಸಿಪಿಯಾಗಿದ್ದ ಆರ್.ಕೆ.ಪಾಟೀಲ ಅವರು ಕಳೆದ ಒಂದೂವರೆ ವರ್ಷದ ಹಿಂದೆ ನಿವೃತ್ತರಾಗಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆಂದು ಗೊತ್ತಾಗಿದೆ.
