ಪ್ರಮುಖ ಪತ್ರಕರ್ತರ ಡೀಲಿಂಗ್- 12.57 ನಿಮಿಷದ ಆಡಿಯೋದಲ್ಲಿದೆ ಪಿನ್ ಟು ಪಿನ್ ಡಿಟೇಲ್ಸ್…!

ಯಾದಗಿರಿ: ಹಗಲು ದರೋಡೆಗೆ ಕೆಲವು ಐನಾತಿ ಪತ್ರಕರ್ತರು ಇಳಿದಿದ್ದು, ಡಿಲೀಂಗ್ ಮಾಡುವ ಮುನ್ನ ನಡೆಯುವ ಸಂಪೂರ್ಣ ಹೈಡ್ರಾಮಾಗಳ ಆಡಿಯೋಗಳು ವೈರಲ್ ಆಗಿದ್ದು, ಮಾಧ್ಯಮದಲ್ಲಿ ಯಾವ ಥರದ ಕ್ರಿಮಿಗಳು ಬರುತ್ತಿದ್ದಾರೆಂಬುದು ಈ ಮೂಲಕ ಬಹಿರಂಗಕೊಂಡಿದೆ.
ವೈರಲ್ ಆಗಿರುವ ಯಾದಗಿರಿ ಜಿಲ್ಲೆಯ ಕೆಲವು ಪತ್ರಕರ್ತರು ನಡೆಸಿರುವ ಡೀಲ್ ನ ಆಡಿಯೋಗಳು ಕರ್ನಾಟಕವಾಯ್ಸ್.ಕಾಂಗೂ ಲಭಿಸಿದ್ದು, ಇವುಗಳನ್ನ ಸಂಪೂರ್ಣವಾಗಿ ಕೇಳಿ.. ನೀಚರು ಹೆಂಗಿರ್ತಾರೆ ಎಂದು ಅರಿತುಕೊಳ್ಳಿ..
ಇತ್ತೀಚೆಗೆ ಮಾಧ್ಯಮಕ್ಕೆ ಬರುವವರ ಸಂಖ್ಯೆಯಲ್ಲಿ ಇಂತವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂಥವರಿಗೆ ಕಡಿವಾಣ ಹಾಕುವ ಯಾವುದೇ ಕಾನೂನುಗಳು ಇಲ್ಲದೇ ಇರುವುದು, ಸಾಮಾಜಿಕವಾಗಿ ಅನ್ಯಾಯವಾಗುತ್ತಿದೆ.
ಮಾಧ್ಯಮಲೋಕಕ್ಕೆ ಬಂದು ಜನಪರ ಚಿಂತನೆಯನ್ನಿಟ್ಟುಕೊಂಡು ಬದುಕು ಸವೆಸುವ ಬದಲು, ಹಣ ಪೀಕಲು ಮುಂದಾಗುವ ಹಲವರಿಂದ ಮಾಧ್ಯಮವನ್ನೇ ನಂಬಿಕೊಂಡಿದ್ದ ನೂರಾರ ಜನರ ಜೀವನ ಅತಂತ್ರವಾಗಿದೆ. ಇದಕ್ಕೇಲ್ಲ, ಈ ಥರದ ಡಿಲೀಂಗ್ ಮಾಡೋ, ವರದಿಗಾರರನ್ನ ಉಳಿಸಿಕೊಳ್ಳುವ ಮೇಲು ಹಂತದ ಪ್ರಮುಖರಿಂದ ಎಂಬುದು ಕೂಡಾ ಬಹುತೇಕ ಸತ್ಯವಾಗಿದೆ.
ಈ ಘಟನೆಯಲ್ಲಿ ಭಾಗಿಯಾಗಿರುವನೆನ್ನಲಾದ ಓರ್ವ ಡೀಲ್ ವರದಿಗಾರರನ್ನ ಕಂಪನಿಯೊಂದು ತೆಗೆದು ಹಾಕಿದೆ. ಆದರೆ, ಕಂಪನಿಯಿಂದ ಸಂಬಳ ಪಡೆದು, ಗಿಂಬಳಕ್ಕಾಗಿ ಕಂಡ ಕಂಡವರ ಮುಂದೆ ಬೆದರಿಸಿ ನಾಟಕವಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ಹುಬ್ಬಳ್ಳಿ-ಧಾರವಾಡದಲ್ಲೂ ದೊಡ್ಡ ಮೊತ್ತಕ್ಕೆ ಆಸಾಮಿಯೋರ್ವ ಬ್ಲ್ಯಾಕ್ ಮೇಲ್ ಮಾಡಿದ್ದು, ಆ ಆಡಿಯೋ ಕೂಡಾ ಬಹುತೇಕ ಕೆಲವೇ ದಿನಗಳಲ್ಲಿ ಹೊರಬೀಳಲಿದೆ…