ಸಮಾಜ-ಸರಕಾರದ ಕೊಂಡಿ ಪತ್ರಕರ್ತರು: ಸಚಿವ ಶಂಕರ ಪಾಟೀಲ ಮುನೇನಕೊಪ್ಪ..
1 min readಹುಬ್ಬಳ್ಳಿ: ಕೋವಿಡ್ 19 ಸಂದರ್ಭದಲ್ಲೂ ಪತ್ರಕರ್ತರು ವೃತ್ತಿ ಧರ್ಮ ಪಾಲನೆ ಮಾಡಿದ್ದಾರೆ. ಸಮಾಜ ಸಂಘರ್ಷ ನಡೆಸುವ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಬ. ಪಾಟೀಲ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇನ್ನು ಕೊರೋನಾ ಲಸಿಕೆ, ಸಚಿವ ಸ್ಥಾನ ಪಡೆಯುವಲ್ಲಿ ಪತ್ರಕರ್ತರ ಕೊಡುಗೆ ನನ್ಮೇಲೆ ಇದೆ. ಯಾವುದೇ ಕೆಲಸ ಕಾರ್ಯ ಮಾಡುವಾಗ ಪತ್ರಕರ್ತರ ಸಲಹೆ ಸೂಚನೆ ತೆಗೆದುಕೊಂಡಿದ್ದೇನೆ ಎಂದರು
ಅಲ್ಲದೇ, ಕೊರೋನಾದಿಂದ ಹೊರಗಡೆ ಬಂದಿದ್ದೇವೆ. ಸಮಾಜ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರು ಹಿಂದೆ ಮುಂದೆ ನೋಡದೇ ತಮ್ಮ ವೃತ್ತಿ ನಿರ್ವಹಿಸಿದ್ದಾರೆ. ಆ ಸಂದರ್ಭದಲ್ಲಿ ಸಮಾಜ ಮತ್ತು ಸರ್ಕಾರದ ಕೊಂಡಿಯಾಗಿ ಕೆಲಸ ಮಾಡಿದ್ದಾರೆ.
ಸಿಎ ಸೈಟ್ ಭೂಮಿ ಪತ್ರಕರ್ತರ ಸಂಘಕ್ಕೆ ಒದಗಿಸುವಲ್ಲಿ ನಾನು ಕೆಲಸ ಮಾಡುತ್ತೇನೇ. ಈಗಾಗಲೇ ಹು-ಧಾ ಅಧ್ಯಕ್ಷ ನಾಗೇಶ ಕಲಬುರಗಿ ಅವರಿಗೆ ತಿಳಿಸಿದ್ದು, ಆ ಭೂಮಿ ಒದಗಿಸಲು ಸರ್ಕಾರ ಇರುತ್ತದೆ. ಹೌಸಿಂಗ್ ಸರ್ಕಾರದ ನೀತಿ ನಿಮಯದ ಮನೆ ಕೊಡುವ ಕೆಲಸ ಮಾಡಲಾಗುವುದು ಎಂದರು.
ಅಲ್ಲದೇ, ಹುಬ್ಬಳ್ಳಿ ಧಾರವಾಡ ವಿಶಿಷ್ಟ ಹಾಗೂ ಉನ್ನತ ಲೇಖನ ಹಾಗೂ ಛಾಯಾಚಿತ್ರಗಳ ಮೂಲಕ ಸಮಾಜಕ್ಕೆ ಒಳ್ಳೆಯದು ಸಂದೇಶ ನೀಡಿರುವ ಉತ್ತಮ ವರದಿಗಾರರು ಲೇಖಕರು, ಫೋಟೋಗ್ರಾಫರ್’ಗೆ ಸಚಿವರಾದ ಮುನೇನಕೊಪ್ಪ ನವರು ಪ್ರಶಸ್ತಿ ಪ್ರದಾನ ಮಾಡಿದರು.
ಸಿಎಂ ಮಾಧ್ಯಮ ಸಂಯೋಜಕರಾಗಿರುವ ಹಿರಿಯರ ಪತ್ರಕರ್ತ ಗುರುಲಿಂಗಸ್ವಾಮಿ ಅವರನ್ನ ಸತ್ಕರಿಸಲಾಯಿತು. ಪತ್ರಕರ್ತ ಸಂಘದ ಅಧ್ಯಕ್ಷ ಗಣೇಶ ಗಂಗ್ಗೊಳ್ಳಿ, ರಾಜು ಬಿಜಾಪುರ, ಲೋಚನೇಶ ಹೂಗಾರ, ಸುಶಿಲೇಂದ್ರ ಕುಂದರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.