ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೃದಯಘಾತದಿಂದ ಸಾವು..
ಚಿಕ್ಕಮಗಳೂರು: ಪತ್ರಕರ್ತ ಸುನೀಲ ಹೆಗ್ಗರವಳ್ಳಿ ಅವರು ಹೃದಯಾಘಾತದಿಂದ ಸಾವಗೀಡಾದ ಘಟನೆ ಮೂಡಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಸುನೀಲ ಅವರ ಮನೆಯಲ್ಲಿ ತೀವ್ರ ಹೃದಯಾಘಾತವಾದ ತಕ್ಷಣವೇ ಗೋಣಿ ಬಿಡು ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ, ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಹಾಯ್ ಬೆಂಗಳೂರು ಪತ್ರಿಕೆಯಿಂದ ಸಾಕಷ್ಟು ಹೆಸರು ಮಾಡಿದ್ದ ಸುನೀಲ ಹೆಗ್ಗರವಳ್ಳಿ ಅವರು, ಮಹತ್ವವಾದ ಮಾಹಿತಿಯನ್ನ ಹೊರಗೆ ಹಾಕುವುದರಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
ಪತ್ರಕರ್ತ ರವಿ ಬೆಳೆಗೆರೆ ಪ್ರಕರಣದಲ್ಲಿ ರಾಜ್ಯದಲ್ಲಿ ಬಹುತೇಕರಿಗೆ ಗೊತ್ತಾಗಿದ್ದ ಸುನೀಲ ಹೆಗ್ಗರವಳ್ಳಿ, ತದನಂತರ ಟಿವಿ ಮಾದ್ಯಮದತ್ತ ಒಲವು ಬೆಳೆಸಿಕೊಂಡು ಮುನ್ನಡೆದಿದ್ದರು.