ರಸ್ತೆ ಅಪಘಾತ ಟಿವಿ9 ವರದಿಗಾರನಿಗೆ ಗಂಭೀರ ಗಾಯ- ಕ್ಯಾಮರಾಮನ್ ಪಾರು

ಕಲಬುರಗಿ: ವರದಿಗಾಗಿ ತೆರಳುತ್ತಿದ್ದ ಸಮಯದಲ್ಲಿ ಎಮ್ಮೆಯೊಂದು ಅಡ್ಡವಾಗಿ ಬಂದು ಬೈಕಿಗೆ ಬಡಿದ ಪರಿಣಾಮ ವರದಿಗಾರ ತೀವ್ರ ಗಾಯಗೊಂಡಿದ್ದು, ಕ್ಯಾಮರಾಮನ್ ಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾವದಗಿ ಕ್ರಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ಕಲಬುರಗಿ ಟಿವಿ9 ವರದಿಗಾರ ಸಂಜಯ ಚಿಕ್ಕಮಠ್ ಗಂಭೀರ ಗಾಯವಾಗಿದ್ದು, ತಲೆಗೆ ಬಲವಾದ ಪೆಟ್ಟಾಗಿದೆ. ಮುಖ ಮತ್ತು ಕಾಲಿಗೂ ಗಾಯಗಳಾಗಿದೆ. ಕ್ಯಾಮರಾಮನ್ ವಿಜಯ ವಾರದ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ 108 ಆಂಬುಲೆನ್ಸ್ ಮೂಲಕ ಕಲಬುರಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವರದಿಗಾರ ಸಂಜಯ ಚಿಕ್ಕಮಠ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದು, ಕ್ಯಾಮರಾಮನ್ ನಾಳೆವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.