ಮನೆ ಬಾಡಿಗೆಯನ್ನ ನಿಧಾನವಾಗಿಯಾದರೂ ಕಟ್ಟಲೇಬೇಕು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
1 min readತುಮಕೂರು: ಮೂರು ತಿಂಗಳ ಮನೆ ಬಾಡಿಗೆಯನ್ನ ನಿಧಾನವಾಗಿಯಾದರೂ ಕಟ್ಟಲೇಬೇಕು. ಬಾಡಿಗೆದಾರರಿಗೆ ಅವಕಾಶ ನೀಡಬೇಕು. ಆದರೆ, ಬಾಡಿಗೆದಾರರು ಬಾಡಿಗೆ ಹಣವನ್ನ ನೀಡಲೇಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಮದ್ಯದಿಂದಲೇ ಸರ್ಕಾರಕ್ಕೆ ಹಣ ಬರುತ್ತೆ ಅನ್ನೋದು ಸುಳ್ಳು. ಜನರ ಒತ್ತಾಯ ಹಾಗೂ ಸ್ಯಾನಿಟೈಸರ್ ಕುಡಿದು ಸತ್ತರು. ಜನರ ಒತ್ತಾಯಕ್ಕಾಗಿ ಮದ್ಯಮಾರಾಟ ಮಾಡಿದ್ವಿ. ಅದ್ರಿಂದ ಸರ್ಕಾರಕ್ಕೆ ಆದಾಯ ಬರುತ್ತೆ ಅಂತಲ್ಲ ಎಂದು ಕಾರಜೋಳ ಹೇಳಿದ್ರು.
ಸಂಘಸಂಸ್ಥೆಗಳ ಹಾಗೂ ಮೈಕ್ರೋ ಫೈನಾನ್ಸ್ ಗಳ ಸಲಾ ವಸೂಲಿ ವಿಚಾರವಾಗಿ ಮಾತನಾಡಿದ ಕಾರಜೋಳ, ಮೂರು ತಿಂಗಳ ಕಾಲ ಸಾಲ ಹಿಂದಿರುಗಿಸುವಂತೆ ಒತ್ತಾಯ ಮಾಡಬಾರ್ದು. ಮನೆ ಬಾಡಿಗೆ ಸಹಿತ ಕೇಳಬಾರದು. ಸರ್ಕಾರ ಕೂಡ ನೀರಿನ ಬಿಲ್ಲು, ವಿದ್ಯುತ್ ಬಿಲ್ಲು ಕಟ್ಟೋಕೆ ಒತ್ತಾಯ ಮಾಡ್ಬಾರ್ದು ಅಂತ ಹೇಳಿದೆ. ಒತ್ತಡ ಹೇರಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋಕೆ ಸೂಚನೆ ನೀಡಿದ್ದೀವಿ. ಯಾರಾದ್ರು ಒತ್ತಡ ಹಾಕಿದ್ರೆ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ನೀಡಬಹುದು ಅವರು ಕ್ರಮ ಕೈಗೊಳ್ತಾರೆ. ಮನೆ ಬಾಡಿಗೆಯನ್ನ ಮೂರು ತಿಂಗಳ ನಂತರವಾದರೂ ನಿಧಾನವಾಗಿ ಕಟ್ಟಲೇಬೇಕೆಂದರು.