Big Exclusive- ಧಾರವಾಡ: ಸರಕಾರಿ “ರಿಮಾಂಡ್ ಹೋಂ”ನಿಂದ ಮೂವರು ಬಾಲಕಿಯರು ಪರಾರಿ…!

ಹುಬ್ಬಳ್ಳಿ: ಪ್ರಕರಣಗಳಲ್ಲಿ ಸಿಲುಕಿ ಮನೆಗೂ ಹೋಗದೆ ರಿಮಾಂಡ್ ಹೋಂನಲ್ಲಿದ್ದ ಮೂವರು ಬಾಲಕಿಯರು ಪರಾರಿಯಾದ ಪ್ರಕರಣ ಸಂಭವಿಸಿದ್ದು, ಮೂರು ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಹದಿನಾರು ವಯಸ್ಸಿನ ಆಸುಪಾಸಿನ ಮೂವರು ಕಚೇರಿಯಲ್ಲಿ ಸಿಬ್ಬಂದಿಗಳು ಇದ್ದಾಗಲೇ, ಅವರುಗಳನ್ನ ಯಾಮಾರಿಸಿ, ಸ್ಥಳದಿಂದ ಪರಾರಿಯಾಗಿದ್ಸಾರೆ.
ಈ ಪ್ರಕರಣದ ಬಗ್ಗೆ ರಿಮಾಂಡ್ ಹೋಂನ ಪ್ರಮುಖರು, ಕರ್ನಾಟಕವಾಯ್ಸ್.ಕಾಂ ಖಚಿತತೆಯನ್ನ ವ್ಯಕ್ತಪಡಿಸಿದ್ದು, ಓರ್ವ ಬಾಲಕಿ ಸಿಕ್ಕಿರುವ ಕುರಿತು ವಿವರಿಸಿದ್ದಾರೆ. ಆದರೆ, ಇನ್ನುಳಿದ ಇಬ್ಬರ ಸುಳಿವು ಸಿಕ್ಕಿಲ್ಲವೆಂದಿದ್ದಾರೆ.
ಘಟನೆಯ ಕುರಿತು ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.