ಚಿನ್ನ ದೋಚಿದ ಖದೀಮರ ರೇಖಾಚಿತ್ರ ಬಿಡುಗಡೆ..!

ಹುಬ್ಬಳ್ಳಿ: ಮಹಾನಗರ ಪಾಲಿಕೆ ಮಾಜಿ ಸದಸ್ಯರ ಮನೆಯ ಮಹಿಳೆಯರನ್ನ ಮರಳು ಮಾಡಿ, 19 ತೊಲೆ ಚಿನ್ನಾಭರಣ ದೋಚಿರುವ ಇಬ್ಬರು ದಗಾಕೋರರ ರೇಖಾಚಿತ್ರಗಳನ್ನ ಪೊಲೀಸರು ಬಿಡುಗಡೆ ಮಾಡಿದ್ದು, ಇವರನ್ನ ಹೋಲುವವರು ಕಂಡು ಬಂದರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಶನಿವಾರ ಹಾಡುಹಗಲೇ ವಿಷ್ಣುಸಾ ಪವಾರ ಎಂಬುವವರ ಮನೆಯೊಳಗೆ, ‘ನಾವು ಉಜಾಲಾ ಕಂಪನಿಯಿಂದ ಬಂದಿದ್ದೇವೆ. ಚಿನ್ನ, ಬೆಳ್ಳಿ, ತಾಮ್ರವನ್ನ ಸ್ವಚ್ಚಗೊಳಿಸಿ ಕೊಡುತ್ತೇವೆ’ ಎಂದು ಮನೆಯೊಳಗೆ ಬಂದಿದ್ದರು.
ಮನೆಯಲ್ಲಿ ಮೊದಲು ತಾಮ್ರವನ್ನ ಸ್ವಚ್ಚಮಾಡಿದ್ದಾರೆ. ನಂತರ ಬೆಳ್ಳಿಯನ್ನೂ ಕ್ಲೀನ್ ಮಾಡಿದ್ದಾರೆ. ಚಿನ್ನವನ್ನೂ ಮಾಡುವುದಾಗಿ ಹೇಳಿ ಕೈಯಲ್ಲಿದ್ದ ಚಿನ್ನದ ಬಳೆ ಹಾಗೂ ಮಂಗಳಸೂತ್ರವನ್ನ ಪಡೆದು, ಪರಾರಿಯಾಗಿದ್ದಾರೆ.
ಬೈಕಿನಲ್ಲಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಇಬ್ಬರದ್ದು ರೇಖಾಚಿತ್ರಗಳನ್ನ ಬಿಡುಗಡೆ ಮಾಡಲಾಗಿದೆ. ನಿಮಗೆ ಇವರನ್ನ ಹೋಲುವ ವ್ಯಕ್ತಿಗಳು ಎಲ್ಲೇ ಕಂಡರೂ ತಕ್ಷಣವೇ ಸಮೀಪದ ಪೊಲೀಸ ಠಾಣೆಗೆ ತಿಳಿಸಿ, ವಂಚಕರನ್ನ ಹಿಡಿಯಲು ಸಹಕರಿಸಿ.