ನಂಬೇಡಾ… ನಂಬೇಡಾ ನರ್ಸ್‌ಗಳನ್ನ ನಂಬೇಡಾ ಎಂದಿದ್ದ “11 MBBS ವಿದ್ಯಾರ್ಥಿಗಳು” ಅಮಾನತ್ತು…
1 min readಹುಬ್ಬಳ್ಳಿ: ನರ್ಸ್ ಗಳ ಬಗ್ಗೆ ಅವಹೇಳನಕಾರಿಯಾಗಿ ರೀಲ್ಸ್ ಮಾಡಿದ್ದಕ್ಕಾಗಿ ಒಂದು ವಾರದ ಮಟ್ಟಿಗೆ 11 ಜನ ವಿದ್ಯಾರ್ಥಿಗಳು ಅಮಾನತ್ತು ಮಾಡಿ ಪ್ರಾಂಶುಪಾಲ ಡಾ ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ.
ನರ್ಸ್ ಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ್ ಮಾಡಿದ್ದ MBBS ವಿದ್ಯಾರ್ಥಿಗಳು, ಭದ್ರ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದರು.
ರೀಲ್ಸ್ ವೈರಲ್ ಆಗುತ್ತಲೇ ಆಕ್ರೋಶಗೊಂಡಿದ್ದ ನರ್ಸ್ ಗಳು, ರೀಲ್ಸ್ ಮಾಡಿದ್ದ ವಿದ್ಯಾರ್ಥಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ನರ್ಸಗಳು ಆಗ್ರಹಿಸಿದ್ದರು. ಹೀಗಾಗಿ 11 ಜನ ವಿದ್ಯಾರ್ಥಿಗಳನ್ನು ಒಂದು ವಾರದ ಮಟ್ಟಿಗೆ ಅಮಾನತ್ತು ಮಾಡಲಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಕ್ಷಮೆಯನ್ನು ಕೇಳಿರುವ ವಿದ್ಯಾರ್ಥಿಗಳು, ರೀಲ್ಸ್ ಮಾಡಿದ್ದು ಮನರಂಜನೆಗೆ. ಆದರೂ ನಾವು ನರ್ಸ್ ಗಳ ಕ್ಷಮೆ ಕೇಳುತ್ತೇವೆ ಎಂದು ವಿದ್ಯಾರ್ಥಿಗಳು ವೀಡಿಯೋ ಮೂಲಕ ನರ್ಸ್ ಗಳ ಕ್ಷಮೆಯನ್ನ ವಿದ್ಯಾರ್ಥಿಗಳು ಕೇಳಿದ್ದಾರೆ.
ಹುಬ್ಬಳ್ಳಿ ಎಬಿವಿಪಿ ಪಾಯಿಂಟ್…
ಇನ್ ಸ್ಟಾ ವಿಚಾರದಲ್ಲಿ ಸಮರ್ಥ ಕಾಲೇಜ್ ವಿದ್ಯಾರ್ಥಿನಿಯರ ಟಾರ್ಗೆಟ್ ಮಾಡಿರೋ ವಿಚಾರ
ಘಟನೆ ಖಂಡಿಸಿ ABVP ಸಂಘಟನೆಯಿಂದ ಪ್ರತಿಭಟನೆ
ಹುಬ್ಬಳ್ಳಿಯ ಚೆನ್ಮಮ್ಮ ಸರ್ಕಲ್ ನಿಂದ ಮಿನಿ ವಿಧಾನಸೌಧ ವರೆಗೂ ಪ್ರತಿಭಟನೆ
ಇನ್ ಸ್ಟಾದಲ್ಲಿ ಕಾಲೇಜ್ ವಿದ್ಯಾರ್ಥಿನಿಯರ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಕಿಡಗೇಡಿ
ಕೆಟ್ಟದಾಗಿ ಪೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಕಿಡಗೇಡಿ
ಕಿಡಗೇಡಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ.
ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ABVP ಕಾರ್ಯಕರ್ತರು
ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿ..