ರಾಯನಾಳದಲ್ಲಿ “ಇದ್ದು ಇಲ್ಲದಂತಾದ” ಪಂಚಾಯತಿ: ಬೆಳ್ಳಂಬೆಳಿಗ್ಗೆ ಗ್ರಾಮಸ್ಥರ ಹೋರಾಟ….
![](https://karnatakavoice.com/wp-content/uploads/2021/09/IMG-20210909-WA0007-1024x768.jpg)
ಹುಬ್ಬಳ್ಳಿ: ತಾಲೂಕಿನ ರಾಯನಾಳ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆಗಿಳಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿರುದ್ಧ ಘೋಷಣೆ ಕೂಗಿ, ಮೂಲಭೂತ ಸೌಕರ್ಯಗಳಾದ ರಸ್ತೆ, ಗಟಾರು, ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿದರು.
![](https://karnatakavoice.com/wp-content/uploads/2021/09/IMG-20210909-WA0011.jpg)
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರೇವಣಸಿದ್ದ ಹದ್ಲಿ, ಸಿದ್ದಪ್ಪ ದೊಡ್ಡಮನಿ, ಗಂಗಾಧರ ಐನಾಪೂರಮಠ, ಸಂದೀಪ ಕಂಬಳಿ, ಶಿವಾನಂದ ಮಾಶೆಟ್ಟಿ, ಮಂಜುನಾಥ ಬಡೀಗೇರ, ಸೋಮು ಬೆಳ್ಳಿಗಟ್ಟಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತಿಯವರು ಇದ್ದು ಇಲ್ಲದಂತಾಗಿದ್ದಾರೆ. ಎಷ್ಟೇ ಸಾರಿ ಹೇಳಿದರೂ ಪ್ರಯೋಜನವಾಗಿಲ್ಲವೆಂದು ಆಕ್ರೋಶವ್ಯಕ್ತಪಡಿಸಿದ ಗ್ರಾಮಸ್ಥರು, ಮಹಾತ್ಮ ಗಾಂಧಿ ಅವರ ಪ್ರತಿಮೆ ಮುಂದೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು.