ರಾಯನಾಳ ಪಂಚಾಯತಿಯವರೇ- ಇದು ದೇವರ ಸ್ಥಳ- ಚೂರು ಕಣ್ಣು ತೆರೆದು ನೋಡ್ತೀರಾ..!
ಹುಬ್ಬಳ್ಳಿ: ಕೊರೋನಾ ಮಹಾಮಾರಿ ಹೆಚ್ಚಾಗುತ್ತಿದ್ದರೂ ಗ್ರಾಮೀಣ ಪ್ರದೇಶದ ಕೆಲವೆಡೆ ಇನ್ನೂ ಸುಧಾರಣೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅದಕ್ಕೆ ತಾಜಾ ಉದಾಹರಣೆಯೇ ಈ ರಾಯನಾಳ ಗ್ರಾಮ.
ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಪಾದಗಟ್ಟಿಯ ಸಮೀಪವೇ ಗಲೀಜು ತುಂಬಿ ತುಳುಕುತ್ತಿದೆ. ಈ ಬಗ್ಗೆ ಹೇಳಿ ಹೇಳಿ ಸಾಕಾಗಿ ಹೋಗಿದ್ದಾರೆ. ಆದರೆ, ಗ್ರಾಮ ಪಂಚಾಯತಿಯವರು ಮಾತ್ರ ಇದನ್ನ ಸರಿ ಮಾಡುವ ಗೋಜಿಗೆ ಹೋಗುತ್ತಿಲ್ಲ.
ದಿನನಿತ್ಯ ಹಲವರು ಇದೇ ರಸ್ತೆಯ ಮೂಲಕ ಸಂಚಾರ ನಡೆಸುತ್ತಾರೆ. ಪ್ರಮುಖ ರಸ್ತೆಯಲ್ಲಿ ಇಷ್ಟೊಂದು ಗಲೀಜಿದ್ದರೂ ಗ್ರಾಮ ಪಂಚಾಯತಿಯವರಿಗೆ ಕಾಣಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಗ್ರಾಮ ಪಂಚಾಯತಿಯವರಿಗೆ ತಮ್ಮ ಗ್ರಾಮದ ಬಗ್ಗೆಯಿರುವ ಇರುವ ಕಾಳಜಿಯೂ ಈ ಮೂಲಕ ಗೊತ್ತಾಗುತ್ತಿದೆ. ಎಲ್ಲರೂ ಗೌರವಿಸುವ ಶ್ರೀ ರೇವಣಸಿದ್ದೇಶ್ವರದ ಬಳಿ ಇರುವ ಈ ಗಲೀಜನ್ನಾದರೂ ತೆಗೆದು ಪುಣ್ಯಕಟ್ಟಿಕೊಳ್ಳಿ ಎಂದು ಜನರು ಆಕ್ರೋಶದಿಂದ ಹೇಳುವಂತಾಗಿದೆ. ಈಗಲಾದರೂ ಪಂಚಾಯತಿ ಮಹಾಶಯರು ಸುಧಾರಣೆ ಮಾಡುತ್ತಾರಾ ಕಾದು ನೋಡಬೇಕಿದೆ.