ರೌಡಿಗಳೇ ಸಮಾಜಕ್ಕೆ ಕಂಟಕವಾದ್ರೇ ಸುಮ್ಮನಿರಲ್ಲ: ರವಿ ಚೆನ್ನಣ್ಣನವರ ಖಡಕ್ ವಾರ್ನಿಂಗ್- Exclusive Video
ನೆಲಮಂಗಲ: ಬಹುತೇಕ ರೌಡಿಗಳು ಅನುಮಾನದಿಂದ ಒಬ್ಬರನೊಬ್ಬರು ಹೊಡೆಯುತ್ತಾರೆ. ಅದು ದೂರಾಗುವ ಹಾಗೇ ಮಾಡಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರುಷ್ಠಾಧಿಕಾರಿ ರವಿ ಚೆನ್ನಣ್ಣನವರ ರೌಡಿಗಳ ಮುಂದೆ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ರು.
ನೆಲಮಂಗಲ ಉಪವಿಭಾಗದಲ್ಲಿ ನಡೆಯುತ್ತಿದ್ದ ಬೆದರಿಕೆ, ರಿಯಲ್ ಎಸ್ಟೇಟ್, ಭೂ ಕಬಳಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೌಡಿ ಪರೇಡ್ ನಡೆಸಿದ ಸಮಯದಲ್ಲಿ ಎಸ್ಪಿ ರವಿ ಚೆನ್ನಣ್ಣನವರ ಮಾತನಾಡುತ್ತಿದ್ರು.
ಮಂಜುನಾಥ, ಚೇಣಿ, ಬೆಂಕಿ ಮಾದೇವ, ರವಿ, ವೆಂಕಟೇಶ, ಲಿಂಗೇಗೌಡ, ಪಾಯಿಸನ್ ರಾಮ, ಹುಸ್ಕೂರು ಶಿವ ಸೇರಿದಂತೆ ಬಹುತೇಕ ರೌಡುಗಳ ಮನೆ ಮೇಲೆ ದಾಳಿ ನಡೆಸಿ ಕರೆತರಲಾಗಿತ್ತು.
ರೌಡಿಗಳಾಗಿ ಬದುಕುತ್ತೇನೆ ಅನ್ನೋದನ್ನ ಬಿಟ್ಟವರಿಗೆ ಒಳ್ಳೆಯರಾಗುವ ಅವಕಾಶ ನೀಡಬೇಕು. ರೌಡಿಷೀಟರ್ ತೆಗೆದು ಹಾಕಿ, ಅವರಿಗೂ ಅವಕಾಶ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ರು.