ರವಿಚಂದ್ರನ್ ಪತ್ರನ ಪ್ರಾರಂಭ: ಸಂಗೀತಕ್ಕೆ ಮನಸೋತ ಕ್ರೇಜಿಸ್ಟಾರ್

ಬೆಂಗಳೂರು: ತಮ್ಮ ಪುತ್ರ ಮನೋರಂಜನ್ ಮುಖ್ಯ ಪಾತ್ರದಲ್ಲಿರುವ ಪ್ರಾರಂಭ ಸಿನೇಮಾದ ಹಾಡುಗಳು ಯುವಸಮೂಹವನ್ನ ಆಕರ್ಷಣೆ ಮಾಡಿದ್ದು, ಮೊಬೈಲ್ ಟ್ಯೂನ್ ಗಳಾಗುತ್ತಿವೆ. ಹೀಗಾಗಿ ತಮಗೂ ಸಂತಸ ಮೂಡಿಸಿದೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದರು.
ಪ್ರಾರಂಭ ಸಿನೇಮಾದ ಆಡೀಯೋ ರಿಲೀಸ್ ಸಮಯದಲ್ಲಿ ಮಾತನಾಡಿದ ರವಿಚಂದ್ರನ್, ಸಂಗೀತ ನಿರ್ದೇಶಕರಿಗೆ ಇದು ಹೊಸ ಚಿತ್ರವಾದರೂ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಹಾಡು ರಚನೆ ಮಾಡಿದ್ದಾರೆ. ಹೊಸ ಚಿತ್ರವಾದರೂ ಹೆಚ್ಚಿನ ಹೆಸರನ್ನ ತಂದುಕೊಡಲಿದೆ ಎಂದು ಹೊಗಳಿದರು.