ನ್ಯಾಯ ಬೆಲೆ ಅಂಗಡಿಯ ಮುಂದೆ ಜನಜಾತ್ರೆ: ಈ ಮಂದಿಗೀ ಬುದ್ಧಿ ಯಾವಾಗ್ ಬರತೈತ್ರೀಪೋ…!
1 min readರಾಯಚೂರು: ಜಿಲ್ಲೆಯಲ್ಲಿ ಎರಡನೇಯ ದಿನದ ಲಾಕ್‌ಡೌನ್ ಆರಂಭವಾಗಿದ್ದು ಜನ ಮಾತ್ರ ಸುಧಾರಿಸುವ ಲಕ್ಷಣಗಳು ಕಂಡು ಬರುತ್ತಿಲ್ಲ. ನ್ಯಾಯಬೆಲೆ ಅಂಗಡಿಯ ಮುಂದೆ ಜಾತ್ರೆಯೇ ನೆರೆದಿದ್ದು, ಯಾವುದೇ ರೀತಿಯ ಜಿಲ್ಲಾಡಳಿತದ ಆದೇಶ ಪಾಲನೆಯಾಗುತ್ತಿಲ್ಲ.
ರಾಯಚೂರು ನಗರದ ವಾರ್ಡ ನಂಬರ ಇಪ್ಪತ್ತೆರಡರ ಮಡ್ಡಿಪೇಟೆಯ ನ್ಯಾಯ ಬೆಲೆ ಅಂಗಡಿ ಮುಂದೆ ನೂರಾರ ಜನ ಸೇರಿದ್ದಾರೆ. ಸಾಮಾಜಿಕ ಅಂತರ್, ಮಾಸ್ಕ್ ಧರಿಸಬೇಕೆಂಬ ನಿಯಮ ಕೇವಲ ಮಾತಿನಲ್ಲಾಗಿದೆ.
ತಮ್ಮದೇ ಆರೋಗ್ಯ ಕಾಪಾಡಿಕೊಳ್ಳಲು ಜನರು ಮುಂದಾಗದೇ ಇರುವುದು ಕೊರೋನಾ ಹೆಚ್ಚಾಗಲು ಕಾರಣವಾಗುತ್ತಿದೆ.
ನಗರದಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆಯಾದರೂ ಜನ ಮಾತ್ರ ಜಾತ್ರೆಯನ್ನೇ ಮುಂದುವರೆಸಿದ್ದಾರೆ.