ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ “ರೇಪ್” ಕೇಸ್‌ಲ್ಲಿ ಜೀವಾವಧಿ ಶಿಕ್ಷೆ ಪ್ರಕಟ…

ಬೆಂಗಳೂರು : ಕೆ.ಆರ್ ನಗರದಲ್ಲಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಇಂದು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಕೇಸ್ನಲ್ಲಿ ಪ್ರಜ್ವಲ್ ರೇವಣ್ಣಗೆ IPC 376(2)K ಅಡಿ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ನ್ಯಾ.ಸಂತೋಷ್ ಗಜಾನನ ಭಟ್ ಅವರು ಆದೇಶ ಹೊರಡಿಸಿದ್ದಾರೆ. ಹಾಗೆಯೇ ಸಂತ್ರಸ್ತೆ ಮಹಿಳೆಗೆ 11 ಲಕ್ಷ ಪರಿಹಾರ ಅಪರಾಧಿ ನೀಡಬೇಕೆಂದು ಕೋರ್ಟ್ ಘೋಷಿಸಿದೆ.
ಇಂದು ಸರ್ಕಾರದ ಪರ ವಕೀಲರಾದ ಬಿ.ಎನ್ ಜಗದೀಶ್, ಅಶೋಕ್ ನಾಯಕ್ ಪ್ರಬಲ ವಾದ ಮಂಡನೆ ಮಾಡಿದ್ದು, ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಪರ ವಕೀಲೆ ನಳಿನಿ ಮಾಯಾಗೌಡ ವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಇದೀಗ ಅಂತಿಮವಾಗಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.
ಕಠಿಣ ಸೆಕ್ಷನ್ಗಳ ಮೂಲಕ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ –
- IPC 376(2)(k), ಜೀವಾವಧಿ, 5 ಲಕ್ಷ –
- IPC 376(2)(n), – ಜೀವಾವಧಿ, 5 ಲಕ್ಷ –
- IPC 354(a) – 3 ವರ್ಷ ಕಠಿಣ ಜೈಲು, 25 ಸಾವಿರ ದಂಡ –
- IPC 354(b) – 7 ವರ್ಷ ಕಠಿಣ ಜೈಲು, 50ಸಾವಿರ ದಂಡ –
- ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 6 ತಿಂಗಳು ಸರಳ ಜೈಲು –
- IPC 354(c) – 3 ವರ್ಷ ಕಠಿಣ ಜೈಲು –
- IPC 506 – 2 ವರ್ಷ ಕಠಿಣ ಜೈಲು 10 ಸಾವಿರ ದಂಡ –
- IPC 201 – 3ವರ್ಷ ಕಠಿಣ ಜೈಲು, 25 ಸಾವಿರ ದಂಡ –
- IT ACt 66(E) – 3 ವರ್ಷ ಕಠಿಣ, 25 ಸಾವಿರ ದಂಡ –
- ಒಟ್ಟು 10 ಲಕ್ಷ ದಂಡ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ –
- ಸಂತ್ರಸ್ತೆ ಮಹಿಳೆಗೆ 11 ಲಕ್ಷ ಪರಿಹಾರ ಘೋಷಿಸಿದ ಕೋರ್ಟ್ –