ಸ್ಟೂಡೆಂಟ್ ರೇಪ್ ಕೇಸ್: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: ಅಂದು ಅಲ್ಲಿದಿದ್ದು ಈಗೀನ್ ಹುಬ್ಬಳ್ಳಿ ಗ್ರಾಮೀಣ ಠಾಣೆ ಪಿಐ ಎಂಬುದು ನಿಮಗೆ ಗೊತ್ತಾ..?
1 min readಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ ಎಂತಹ ಅಧಿಕಾರಿ ಎಂಬುದಕ್ಕೆ ಸಾಕ್ಷಿಯೊಂದು ದೊರಕಿದ್ದು, ಅವರೇ ಹಿಡಿದು ಜೈಲುಗೊಪ್ಪಿಸಿದ ಐದು ಆರೋಪಿಗಳಿಗೀಗ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡುವ ಜೊತೆಗೆ ಲಕ್ಷಾಂತರ ರೂಪಾಯಿ ದಂಡವನ್ನ ವಿಧಿಸಿದೆ. ಅಂದು ರಮೇಶ ಗೋಕಾಕ ತೆಗೆದುಕೊಂಡ ತೀರ್ಮಾನಗಳು, ಇಂದು ಕಿರಾತಕರಿಗೆ ಜೈಲು ಪಾಲಾಗುವಂತೆ ಮಾಡಿದೆ.
ಏನದು ಪ್ರಕರಣ ಇಲ್ಲಿದೆ ನೋಡಿ ವರದಿ
ಬೆಳಗಾವಿಯ 3 ನೇ ಅಧಿಕ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನವೆಂಬರ್ 13ರಂದು ಅತ್ಯಾಚಾರ ಪ್ರಕರಣದ ಐದು ಜನ ಅಪರಾಧಿಗಳಾದ ಮುತ್ಯಾನಟ್ಟಿಯ
- ಸಂಜು ಸಿದ್ದಪ್ಪ ದಡ್ಡಿ
- ಸುರೇಶ ಬರಮಪ್ಪ ದಡ್ಡಿ ಇಬ್ಬರಿಗೂ ತಲಾ 5 ಲಕ್ಷ 25 ಸಾವಿರ.
- ಸುನೀಲ ಲಗಮಪ್ಪ ರಾಜಕಟ್ಟಿ 5 ಲಕ್ಷ 11 ಸಾವಿರ.
- ಮಣಗುತ್ತಿಯ ಮಹೇಶ ಬಾಲಪ್ಪ ಶಿವಣ್ಣಗೋಳ ಹಾಗೂ 5.ಶಹಾಪುರದ ಸೋಮಶೇಖರ ದುರದುಂಡೇಶ್ವರ ಎಂಬುವರಿಗೆ ತಲಾ 5 ಲಕ್ಷ 5 ಸಾವಿರ ರೂಪಾಯಿ ದಂಡ ವಿಧಿಸಿ ಐದು ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
2017 ರಲ್ಲಿ ಮುತ್ಯಾನಟ್ಟಿ ಗುಡ್ಡಕ್ಕೆ ಸುತ್ತಾಡಲು ಬಂದಿದ್ದ ಪ್ರೇಮಿಗಳ ಮೇಲೆ ದೌರ್ಜನ್ಯ ನಡೆಸಿ, ಯುವಕನ ಜೊತೆಗಿದ್ದ ಅಪ್ರಾಪ್ತೆ ಮೇಲೆ 5 ಯುವಕರು ಅತ್ಯಾಚಾರ ನಡೆಸಿದ್ದ ಆರೋಪ ಸಾಬೀತಾಗಿದೆ. ಪ್ರಕರಣ ನಡೆಸಿದ ಬೆಳಗಾವಿಯ ಮೂರನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಅಣ್ಣಯ್ಯನವರ ಪೋಕ್ಸೋ ಕಾಯ್ದೆಯಡಿ ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಅಲ್ಲದೆ ದಂಡವನ್ನೂ ವಿಧಿಸಿದ್ದಾರೆ.
2017 ಪ್ರೇಮಿಗಳ ದಿನಾಚರಣೆಯ ಮಾರನೇ ದಿನದಂದು ಮುತ್ಯಾನಟ್ಟಿ ಗುಡ್ಡದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಷಯ ಬಹಿರಂಗ ಪಡಿಸಿದಂತೆ ಪ್ರೇಮಿಗಳಿಗೆ ಜೀವ ಬೆದರಿಕೆ ಹಾಕಿದ್ದರು. ಆದರೆ ಅತ್ಯಾಚಾರ ವಿಷಯ ತಿಳಿದು ಅಪ್ರಾಪ್ತೆಯ ಪೋಷಕರು ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಪೊಲೀಸ್ ಇನ್ಸಪೆಕ್ಟರ್ ರಮೇಶ ಗೋಕಾಕ ಹಾಗೂ ಸಿಬ್ಬಂದಿಗಳು ಸೇರಿ ಆರೋಪಿಗಳನ್ನು ಪತ್ತೆ ಹಚ್ಚಿ ಸಾಕ್ಷಿ ಸಮೇತ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದರು.
ಐಪಿಸಿ 376 (ಡಿ), 395, 341, 354, 385, 504, 506 ಮತ್ತು 4 , 6 , 12 ರ ಪೋಕ್ಕೋ ಕಾಯ್ದೆ ಹಾಗೂ ಐಟಿ ಆ್ಯಕ್ಸ್ 67ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ತನಿಖಾಧಿಕಾರಿ ರಮೇಶ ಗೋಕಾಕ, ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ 186 ದಾಖಲೆಗಳು ಹಾಗೂ 46 ಮುದ್ದೆಮಾಲು ಗುರುತಿಸಿದ ಆಧಾರ ಮೇಲೆ ಅತ್ಯಾಚಾರ ಕೃತ್ಯವೆಸಗಿದ ಐವರನ್ನು ಅಪರಾಧಿಗಳೆಂದು ಪರಿಗಣಿಸಿದ್ದಾರೆ. ಸಂತ್ರಸ್ತೆಯ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಎಲ್. ವಿ. ಪಾಟೀಲ ವಕಾಲತ್ತು ವಹಿಸಿದ್ದರು.
ಬೆಳಗ್ಗೆ ಕಾಕತಿ ಪಿಐ ರಾಘವೇಂದ್ರ ಹಳ್ಳೂರ, ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿಗಳು ಐದು ಜನ ಅಪರಾಧಿಗಳನ್ನು ಹಿಂಡಲಗಾ ಜೈಲಿನಿಂದ ಕರೆತಂದು ಕೋವಿಡ್-19 ಪರೀಕ್ಷೆ ನಡೆಸಿದರು. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈಗ ಶಿಕ್ಷೆ ಪ್ರಕಟವಾದ ನಂತರ ಮತ್ತೆ ಹಿಂಡಲಗಾ ಕಾರಾಗೃಹಕ್ಕೆ ಅಪರಾಧಿಗಳನ್ನು ಕರೆದೊಯ್ಯಲಾಯಿತು.
ರಮೇಶ ಗೋಕಾಕ ದಕ್ಷ ಪೋಲಿಸ್ ಇನ್ಸಪೆಕ್ಟರ್
ಅಂದಿನ ಕಾಕತಿ ಪೋಲಿಸ್ ಇನ್ಸಪೆಕ್ಟರ್ ಇಂದಿನ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಇನ್ಸಪೆಕ್ಟರ್ ರಮೇಶ ಗೋಕಾಕ್. ಈಗಲೂ ಕೂಡಾ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ ಗೋಕಾಕ, ಗ್ರಾಮೀಣ ವೃತ್ತ ನಿರೀಕ್ಷಕರಾಗಿ ಅತ್ಯುತ್ತಮ ಸೇವೆಯನ್ನ ನೀಡುತ್ತಿದ್ದಾರೆ.