ಧಾರವಾಡ ಅತ್ಯಾಚಾರ ಪ್ರಕರಣ- ಕೇಸ್ ದಾಖಲು ಮಾಡದೇ ಕಳಿಸಿದ್ದು ಮಹಿಳಾ ಅಧಿಕಾರಿ…!

ಧಾರವಾಡ: ನಗರದ ಹಳೇ ಡಿಎಸ್ಪಿ ಸರ್ಕಲ್ ನಲ್ಲಿರುವ ಆಟೋ ಚಾಲಕ ಮತ್ತು ಮೂವರು ನಡೆಸಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಹೇಳು ಬಂದಿದ್ದ ಯುವತಿಯನ್ನೇ ಬಡಿದು ಕಳಿಸಿದ್ದು, ಓರ್ವ ಮಹಿಳಾ ಅಧಿಕಾರಿ ಎಂಬ ಆತಂಕಕಾರಿ ಅಂಶವನ್ನ ಅಂದು ದೂರು ನೀಡಲು ಬಂದವರು, ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯನ್ನ ನೀಡಿದ್ದಾರೆ.

ಮಹಿಳೆಯರ ಸಂರಕ್ಷಣೆಯನ್ನ ಮಾಡಬೇಕಾದ ಅಧಿಕಾರಿಯೇ ಯುವತಿಯ ವಿರುದ್ಧವಾಗಿ ಕೆಲಸ ಮಾಡಿರುವುದು ಯಾವ ಕಾರಣಕ್ಕೆ ಎಂಬುದು ನಿಗೂಢವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದವರ ಬಗ್ಗೆಯೂ ಮಾಹಿತಿಯಿರುವ ಮಹಿಳಾ ಅಧಿಕಾರಿಗೆ, ಮಾನವೀಯತೆ ಜೊತೆಗೆ ಕಾನೂನು ಪಾಲನೆ ಮಾಡುವುದು ಬೇಡವಾಗಿದೆ ಎಂದು ದೂರು ನೀಡಲು ಬಂದವರ ಪೈಕಿ ಓರ್ವರು ಮಾಹಿತಿಯನ್ನ ನೀಡಿದ್ದಾರೆ.
ಘಟನೆ ನಡೆದ ದಿನದಂದು ಯುವತಿ, ಯುವತಿಯ ಚಿಕ್ಕಮ್ಮ ಹಾಗೂ ಓರ್ವ ಸಮಾಜದ ಪ್ರಮುಖರು ಧಾರವಾಡದ ಮಹಿಳಾ ಅಧಿಕಾರಿಯ ಕಚೇರಿಗೆ ಬಂದಾಗ, ಬಂದವರನ್ನೇ ಅಸಹ್ಯವಾಗಿ ಮಾತನಾಡಿಸಿ, ಪ್ರಕರಣ ಪಡೆಯದೇ ಕಳಿಸಿದ್ದಾರೆ. ಅಷ್ಟೇ ಅಲ್ಲ, ಯುವತಿ ಮರುದಿನವೇ ಧಾರವಾಡ ಬೀಡುವಂತೆ ಬೆದರಿಕೆ ಹಾಕಿದ್ದಾರೆಂದು ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯನ್ನ ನೀಡಿದ್ದಾರೆ.
ಯುವತಿಗೆ ಆಗಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡುವ ದಿನಗಳು ಸಧ್ಯದಲ್ಲೇ ಬರಲಿವೆ. ಬೆದರಿಸಿ ಊರಿಗೆ ಕಳಿಸಿರುವ ಮಹಿಳಾ ಅಧಿಕಾರಿಯೇ ಆಕೆಯನ್ನ ಕರೆಸಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸುತ್ತಾರೋ ಇಲ್ಲವೋ ಎಂದು ಕಾದು ನೋಡುತ್ತಿದ್ದೇವೆ. ಹೀಗೆ ಮುಂದುವರೆದರೇ ಮಹಿಳಾ ಅಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆಂದು ಅಂದು ದೂರು ನೀಡಲು ಹೋದವರಲ್ಲಿ ಒಬ್ಬರು ಮಾಹಿತಿಯನ್ನ ನೀಡಿದ್ದಾರೆ.