ಧಾರವಾಡ ಅತ್ಯಾಚಾರ ಪ್ರಕರಣ- ಎಸಿಪಿ ಅನುಷಾ ಅವರಿಗೆ ಮೂವರ ಮೊಬೈಲ್ ನಂಬರ ಕೊಟ್ಟಿದ್ಯಾರು…!
1 min readಧಾರವಾಡ: ತಮ್ಮ ಮಗಳನ್ನ ಕರೆದುಕೊಂಡು ಹೋಗಿ ಕೆಡಿಸಿದ್ದಾರೆ. ಮಧ್ಯಾಹ್ನದಿಂದ ರಾತ್ರಿ ಎಂಟೂವರೆ ತನಕ ಆಕೆಯೊಂದಿಗೆ ನಡೆಯಬಾರದ್ದು ನಡೆದಿದೆ. ತೆಗೆದುಕೊಳ್ಳಿ ಈ ಮೂರು ಮೊಬೈಲ್ ನಂಬರ ಎಂದು ಆ ಮಹಿಳೆ ಧಾರವಾಡದ ಎಸಿಪಿ ಅನುಷಾ ಅವರಿಗೆ ಕೊಟ್ಟಿದ್ದರೆಂದು ಖಚಿತವಾಗಿ ಮಾಹಿತಿ ಗೊತ್ತಾಗಿದೆ.
ಈ ಬಗ್ಗೆ ವಿವರವಾದ ಮಾಹಿತಿಯನ್ನ ನೀಡಿರುವ ಆ ಮಹಿಳೆ, ಅಂದು ನಡೆದ ಪ್ರತಿಯೊಂದು ಕ್ಷಣವನ್ನ ಕರ್ನಾಟಕವಾಯ್ಸ್.ಕಾಂ ಗೆ ನೀಡಿದ್ದಾರೆ. ಅಂದು ಆ ಯುವತಿಯನ್ನ ಮನೆಯಿಂದ ಧಾರವಾಡದ ಮುರುಘಾಮಠದ ಬಳಿಯಿರುವ ಆಟೋ ಚಾಲಕನೊಬ್ಬ ಕರೆದುಕೊಂಡು ಹೋಗಿದ್ದಾನೆ. ಆತನೇ, ಮೊದಲು ಮನೆಯಲ್ಲಿದ್ದ ಎರಡು ಸಾವಿರ ರೂಪಾಯಿಗಳನ್ನ ಪಡೆದಿದ್ದ.
ಯುವತಿಯನ್ನ ಕರೆದುಕೊಂಡು ಹೋಗಿದ್ದ ಕಿರಾತಕರು, ಆಕೆಯನ್ನ ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ. ಈ ವಿಷಯ ಗೊತ್ತಾದ ತಕ್ಷಣವೇ ನಾವೂ ಎಸಿಪಿ ಅನುಷಾ ಅವರ ಬಳಿಯೇ ಹೋಗಿ, ಪ್ರಕರಣ ದಾಖಲು ಮಾಡುವಂತೆ ಬೇಡಿಕೊಂಡೆವು. ಆದರೆ, ಅವರು ಹೇಳಿದ ಹಾಗೇ ನಡೆದುಕೊಳ್ಳಲಿಲ್ಲ.
ಮೂವರ ಮೊಬೈಲ್ ನಂಬರ ಹೆಸರು ಹೇಳಿದರೂ ಅವರನ್ನ ಕರೆಸಿ, ಅದೇನೂ ಮಾಡಿದ್ರು ಗೊತ್ತೆಯಿಲ್ಲ. ಓರ್ವ ಯುವತಿಗೆ ಆಗಿರುವ ಅನ್ಯಾಯವನ್ನ ಹೊರಗೆ ಹಾಕುವ ಬದಲು, ಅದರಲ್ಲೊಬ್ಬ ಮದುವೆಯಾಗ್ತಾನಂತೆ ಎಂದು ಅಧಿಕಾರಿ ಹೇಳಿದ್ದು, ನಮಗೆ ತೀರಾ ಅಸಹ್ಯವೆನಿಸಿತು ಎಂದು ಹೇಳಿಕೊಂಡಿರುವ ಮಹಿಳೆಗೆ ಆಗಿರುವ ಅನ್ಯಾಯವನ್ನ ಎಲ್ಲರೂ ಖಂಡಿಸುವ ಜೊತೆಗೆ, ಯುವತಿಗೆ ಮೇಲೆ ನಡೆದಿರುವ ಪ್ರಕರಣದ ವಿರುದ್ಧವೂ ಕೂಗೇಳಬೇಕಿದೆ ಅಲ್ಲವೇ…!