ಡಾ. ರಾಮು ಮೂಲಗಿಯವರನ್ನ ಅವಿರೋಧ ಆಯ್ಕೆ ಮಾಡಿ: ಅಶೋಕ ಸಜ್ಜನ, ಲಕ್ಕಮ್ಮನವರ ಕೋರಿಕೆ…!
1 min readಹುಬ್ಬಳ್ಳಿ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಶಿಕ್ಷಕ ಡಾ.ರಾಮು ಮೂಲಗಿಯವರನ್ನ ಅವಿರೋಧ ಆಯ್ಕೆ ಮಾಡುವುದು ಸೂಕ್ತವೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಂ.ಸಜ್ಜನ ಹಾಗೂ ರಾಜ್ಯ ಗೌರವಾಧ್ಯಕ್ಷ ಎಲ್.ಐ.ಲಕ್ಕಮ್ಮನವರ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಹೇಳಿದ್ದಿಷ್ಟು..
ಕನ್ನಡಿಗರ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಮೇ 9 ರಂದು ಚುನಾವಣೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೂ ಚುನಾವಣೆ ನಡೆಯಲಿದೆ. ಈ ಸಲದ ಚುನಾವಣೆಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಡಾ.ರಾಮು ಮೂಲಗಿಯವರು ಚುನಾವಣೆಗಿಳಿಯುವ ಸುದ್ದಿ ಜಿಲ್ಲೆಯಾದ್ಯಂತ ಹರಡುತ್ತಿರುವುದು ಸಂತೋಷದ ಸಂಗತಿ. ಕಲೆ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಗಳ ಸಂಘಟನೆಗಳಿಗೆ ಅಧ್ಯಕ್ಷ ಹುದ್ದೆಗೆ ಕವಿ ಕಲಾವಿದರು ಹಾಡುಗಾರರು ನಿಲ್ಲುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ
ಆದರೆ, ಈಗಿರುವ ಹಾಲಿ ಅಧ್ಯಕ್ಷರು 2 ಬಾರಿ ಅಧ್ಯಕ್ಷರಾಗಿದ್ದು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಸ್ವತಃ ಕಲಾವಿದ ಸಾಹಿತಿ ಜಾನಪದ ತಜ್ಞ ಆಶು ಕವಿಯಾದ ಡಾ.ರಾಮು ಮೂಲಗಿಯವರಿಗೆ ಈ ಸಲದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟು ತಾವುಗಳು ಶಕ್ತಿವಂತರಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಲ್ಲುವುದು ಸೂಕ್ತವೆಂಬ ಅಭಿಪ್ರಾಯ ನನ್ನದು. ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ನಾನು ಬಲ್ಲಂತೆ ಈ ಸಲ ರಾಮು ಮೂಲಗಿ ಅವರು ಅವಿರೋಧವಾಗಿ ಆಯ್ಕೆಗೊಂಡರೆ ಧಾರವಾಡ ಜಿಲ್ಲೆಯ ಶಿಕ್ಷಕ ಸಮುದಾಯ ಕಲಾವಿದರ ಬಳಗ ಸಾಹಿತಿಗಳ ಕೂಟಕ್ಕೆ ಬಹಳಷ್ಟು ಆನಂದವಾಗುವುದರಲ್ಲಿ ಸಂದೇಹವಿಲ್ಲ ಇಂಥ ತ್ಯಾಗ ಗುಣದಿಂದ ಹಾಲಿ ಅಧ್ಯಕ್ಷರಿಗೆ ದೊಡ್ಡ ಗೌರವ ಬಂದೊದಗುವುದು ಖಂಡಿತ ಸತ್ಯ. ಇದೊಂದು ರಾಜ್ಯಕ್ಕೆ ಮಾದರಿ ತೋರಿಸಿ ಕೊಟ್ಟಂತಾಗುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಸಾಹಿತಿಗಳೇ ಅಧ್ಯಕ್ಷರಾಗೋದು ಸೂಕ್ತವಲ್ಲವೇ…?
ಡಾ.ರಾಮು ಮೂಲಗಿಯವರು ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಕಳೆದ ಎರಡೂವರೆ ಮೂರು ದಶಕಗಳಿಂದ ಪ್ರಾಥಮಿಕ ಶಾಲಾ ಮಕ್ಕಳ ವಿಶೇಷವಾಗಿ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನಲ್ಲಿ ಇರ್ತಕ್ಕಂತಹ ಕೃಷಿ ಕೂಲಿ ಕಾರ್ಮಿಕ ಮಕ್ಕಳ ಮತ್ತು ದೀನದಲಿತರ ಮಕ್ಕಳ ವಿಶೇಷವಾಗಿ ಅನಾಥ ಮಕ್ಕಳಿಗಾಗಿ ತಮ್ಮಒಂದು ಶಿಕ್ಷಣದ ಸೇವೆಯನ್ನು ಹಗಲಿರುಳು ಶ್ರಮಿಸಿದಂತ ಒಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾಗಿದ್ದಾರೆ.
ಅವರು ಕಿರಿಯ ವಯಸ್ಸಿನಿಂದ ಇಲ್ಲಿವರೆಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಜಾನಪದ ಕ್ಷೇತ್ರದಲ್ಲಿ ಆಶುಕವಿಯಾಗಿ ಜಾನಪದ ಸೊಗಡನ್ನು ರಾಷ್ಟ್ರದಾದ್ಯಂತ ರಾಜ್ಯದಾದ್ಯಂತ ಪ್ರಸರಿಸಿದಂತ ಮಹಾನ್ ಆದರ್ಶ ಶಿಕ್ಷಕ ಇಂಥವರು ನಮ್ಮ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗುವುದಂತದ್ದು ಅತ್ಯಂತ ಸೂಕ್ತವಾಗಿದೆ. ನಾಡಿನ ಜಿಲ್ಲೆಯ ಸಮಸ್ತ ಸಾಹಿತಿಗಳು ಕಲಾವಿದರು ಸಾಹಿತ್ಯ ಪರಿಷತ್ ನ ಸರ್ವ ಮತದಾರ ಬಾಂಧವರು ಡಾ. ರಾಮು ಮೂಲಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಅತ್ಯಂತ ಸೂಕ್ತವಾಗಿದೆ. ಈ ದಿಶೆಯಲ್ಲಿ ಸತತವಾಗಿ 2.3 ದಶಕಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ವಿಶಿಷ್ಟ ಛಾಪನ್ನು ಮೂಡಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದಂತ ಡಾ. ಲಿಂಗರಾಜ ಅಂಗಡಿ ಅವರು ಕೂಡ ಈ ಒಂದು ಅನುಭವವನ್ನು ಮೇಳ್ವಯಿಸಿ ರಾಜ್ಯಮಟ್ಟದ ಒಬ್ಬ ಪದಾಧಿಕಾರಿಯಾಗಿ ಆಯ್ಕೆಯಾಗಿ ಧಾರವಾಡ ಜಿಲ್ಲೆಯ ಸಾಹಿತ್ಯ ಸಿರಿಯನ್ನು ಹೆಚ್ಚಿಸಬೇಕು. ಧಾರವಾಡ ಜಿಲ್ಲಾ ಅಧ್ಯಕ್ಷರನ್ನಾಗಿ ಡಾ.ರಾಮು ಮೂಲಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವಂತದ್ದು ಸೂಕ್ತವಾಗಿದೆ ನಾಡಿನ ಈ ಜಿಲ್ಲೆಯ ಸಮಸ್ತ ಸಾಹಿತ್ಯ ಮತದಾರ ಬಾಂಧವರು ಅವರನ್ನು ಬೆಂಬಲಿಸಿ ಅವಿರೋಧವಾಗಿ ಆಯ್ಕೆ ಮಾಡಬೇಕೆನ್ನುವುದು ನಮ್ಮ ಹಂಬಲವಾಗಿದೆ.
ಇಂತಿ..
ಅಶೋಕ.ಎಂ.ಸಜ್ಜನ, ರಾಜ್ಯಾಧ್ಯಕ್ಷರು
ಎಲ್.ಐ.ಲಕ್ಕಮ್ಮನವರ, ರಾಜ್ಯ ಗೌರವಾದ್ಯಕ್ಷರು
ಕರ್ನಾಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ