ಮಾಜಿ ಸಿಎಂ ಸಿದ್ಧರಾಮಯ್ಯ ತವರಿನಲ್ಲಿ ಕಟ್ಟುತ್ತಿರುವ “ರಾಮ ಮಂದಿರ” ಹೇಗಿದೆ ಗೊತ್ತಾ…!
1 min readಮೈಸೂರು: ರಾಮ ಮಂದಿರ ನಿಧಿ ಸಂಗ್ರಹದ ಲೆಕ್ಕ ಕೇಳಿ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬಳಿಕ ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ರಾಮ ಮಂದಿರ ಕಟ್ಟುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ಅಷ್ಟಕ್ಕೂ ಮಾಜಿ ಸಿಎಂ ತವರಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಹೇಗಿದೆ.? ಎಷ್ಟು ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಮಂದಿರದ ವಿಶೇಷತೆಗಳು ಏನು..? ಮಂದಿರ ಲೋಕಾರ್ಪಣೆ ಯಾವಾಗ..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಗ್ರಾಮ ಸಿದ್ದರಾಮನಹುಂಡಿಯಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, 120 ಅಡಿ ಉದ್ದ 45 ಅಡಿ ಅಗಲದ ನಿವೇಶನದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ.
ಇದರ ಗರ್ಭಗುಡಿ 40×60 ಅಡಿ ವಿಶಾಲವಾಗಿದ್ದು, ಪ್ರಾಂಗಣ ಹಾಗೂ ಹೊರಾಂಗಣ ಕಟ್ಟಡಗಳು ಇವೆ. ಗರ್ಭಗುಡಿಯ ಸುತ್ತ 10 ದೇವರುಗಳ ಸ್ಥಾಪನೆಗೆ ಪ್ರಭಾವಳಿಗಳ ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಶೇ. 80 ರಷ್ಟು ಕಾಮಗಾರಿ ಪೂರ್ಣವಾಗಿದೆ. ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ನೂತನ ರಾಮ ಮಂದಿದರ ಅಂಗವಾಗಿ ಈ ಭಾರಿ ವಿಜೃಂಭಣೆಯಿಂದ ರಾಮನವಮಿ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮದ ಪ್ರತಿಮನೆಯಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ.
ಮೊದಲು ಇಲ್ಲಿ ಹೆಂಚಿನ ಛಾವಣಿಯಿರುವ ರಾಮಮಂದಿರವಿತ್ತು . ಶಿಥಿಲವಾದ ರಾಮ ಮಂದಿರವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂದು ಸುದ್ದಿಯಾಗಿದ್ದ ಸಿದ್ದರಾಮಯ್ಯ ಅವರು ಇದೀಗ ಸ್ವಂತ ಊರಲ್ಲಿ ಮಂದಿರ ಕಟ್ಟುತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.