ಬಮ್ಮಿಗಟ್ಟಿ-ತಂಬೂರಲ್ಲಿ ಸಂತೋಷ ಲಾಡ್-ರಾಮನಗೌಡ ಪಾಟೀಲ ಜುಗಲ್ ಬಂಧಿ…!
1 min readಕಲಘಟಗಿ: ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಯಾರೋಬ್ಬರು ತೊಂದರೆಗೆ ಸಿಲುಕಬಾರದೆಂಬ ಉದ್ದೇಶದಿಂದ ಮಾಜಿ ಸಚಿವ ಸಂತೋಷ ಲಾಡ ಅವರು, ಕ್ಷೇತ್ರದ ಮನೆ ಮನೆಗೂ ಅಕ್ಕಿಯನ್ನ ವಿತರಣೆ ಮಾಡುತ್ತಿದ್ದಾರೆ. ಅದಕ್ಕೆ ಸಾಥ್ ಕೆಲವು ಗ್ರಾಮಗಳಲ್ಲಿ ಸಾಥ್ ನೀಡುತ್ತಿರುವುದು ಕಾಂಗ್ರೆಸ್ ನ ನಾಯಕ ರಾಮನಗೌಡ ಪಾಟೀಲ.
ದೇವಿಕೊಪ್ಪ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಮ್ಮಿಗಟ್ಟಿ-ತಂಬೂರ ಗ್ರಾಮದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡುತ್ತಿದ್ದ ಸಮಯದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಅವರ ಬೆನ್ನಲಬಾಗಿ ನಿಂತಿದ್ದಾರೆ ರಾಮನಗೌಡ ಪಾಟೀಲ.
ಕಲಘಟಗಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಹೊಂದಿರುವ ರಾಮನಗೌಡ ಪಾಟೀಲ ಅವರು, ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಹೀಗಾಗಿ, ಇವರಿಬ್ಬರ ಜುಗಲ ಬಂಧಿ ಜನಮನ್ನಣೆ ಗಳಿಸಿದೆ.
ಸಾರ್ವಜನಿಕ ಜೀವನದಲ್ಲಿ ಸದಾಕಾಲ ಜನರ ಸೇವೆ ಮಾಡಬೇಕೆಂಬ ಸಂತೋಷ ಲಾಡ ಅವರ ಬಯಕೆಗೆ, ರಾಮನಗೌಡ ಪಾಟೀಲ ಥರದವರು ಸಾಥ್ ನೀಡುತ್ತಿರುವುದು ಮತ್ತಷ್ಟು ಬಲವನ್ನ ನೀಡಿದೆ.