ಚಿರತೆ ದಾಳಿಗೆ ಬಲಿಯಾದ ವೃದ್ಧೆಯ ಮನೆಗೆ ಡಿಸಿಎಂ ಭೇಟಿ: ಕುಟುಂಬದವರಿಗೆ ಸಾಂತ್ವನ

ರಾಮನಗರ: ಚಿರತೆ ದಾಳಿಗೆ ಬಲಿಯಾಗಿದ್ದ ವೃದ್ಧೆ ಕುಟುಂಬಕ್ಕೆ ಡಿಸಿಎಂ ಡಾ.ಅಶ್ವಥ್ ನಾರಾಯಣ ಭೇಟಿ, ಮೃತ ಗಂಗಮ್ಮ ಕುಟುಂಬಸ್ಥರಿಗೆ ಪರಿಹಾರ ಧನ ಆರ್ಡರ್ ಕಾಫಿ ವಿತರಣೆ ಮಾಡಿದರು.
ಮೃತ ಗಂಗಮ್ಮ ಅವರ ಸೊಸೆ ಲಕ್ಷ್ಮಮ್ಮ, ಮೊಮ್ಮಗ ರವಿಶಂಕರ್ ಗೆ ಸಾಂತ್ವನ ಹೇಳಿದ ಡಿಸಿಎಂ. ಡಿಸಿಎಂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಣಗೆ ಡಿಸಿ, ಸಿಇಓ ಸೇರಿದಂತೆ ಅಧಿಕಾರಿಗಳ ಸಾಥ್ ನೀಡಿದ್ದರು. ಮೇ 16ರಂದು ಮನೆ ಮುಂದೆ ಕುಳಿತಿದ್ದ ವೃದ್ಧೆಯನ್ನು ಎಳೆದೋಯ್ದು ಕೊಂದು ಹಾಕಿದ್ದ ಚಿರತೆ. ಚಿರತೆ ದಾಳಿ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ ಭಯಪಡಬೇಡಿ. ಆದಷ್ಟು ಬೇಗ ಚಿರತೆಗಳ ಸೆರೆ ಹಿಡಿಯಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ ಭರವಸೆ ನೀಡಿದರು.