Posts Slider

Karnataka Voice

Latest Kannada News

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ: ಶಿಕ್ಷಕ ರಾಮಚಂದ್ರ ಮೋನೆಯವರ ವಿಶೇಷ ಲೇಖನ…

1 min read
Spread the love

ಪ್ರಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ : ವಿಜ್ಞಾನಿಗಳ ಕೊಡುಗೆ ಸ್ಮರಿಸೋಣ..!

ದಿನಾಂಕ 23ನೇ ಆಗಸ್ಟ 2023ರ ಸಾಯಂಕಾಲ ಸರಿಸುಮಾರು 6 ಗಂಟೆ 03 ನಿಮಿಷಕ್ಕೆ ವಿಕ್ರಮ್ ಹೆಸರಿನ ಲ್ಯಾಂಡರ್, ಪ್ರಜ್ಞಾನ್ ಹೆಸರಿನ ರೋವರ್ ವಾಹನ ಚಂದ್ರನ ದಕ್ಷಿಣ ದ್ರುವದ ಮೇಲೆ ಇಳಿದು ಯಶಸ್ಸನ್ನು ಸಾಧಿಸಿದ ಸವಿನೆನಪಿಗೋಸ್ಕರ ಆಚರಿಸುವ ವಿಜ್ಞಾನದ ಹಬ್ಬವೇ ಇಂದಿನ ಪ್ರಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ. ಅಂದರೆ ಅದುವೇ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಮೈಲಿಗಲ್ಲು ಸಾಧನೆಯಾದ ಚಂದ್ರಯಾನ-3.

ಭಾರತದಲ್ಲಿ ನಾವು ಆಚರಿಸುತ್ತರುವ ಈ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಭಾರತದ ಇತಿಹಾಸದಲ್ಲಿಯೇ ಮೊದಲ ಸಂಭ್ರಮಾಚರಣೆಯಾಗಿದೆ. ಭಾರತೀಯ ಇಸ್ರೋ ನಡೆಸಿದ ಈ ಚಂದ್ರಯಾನ 3ರ ಯಶಸ್ಸನ್ನು ಕೊಂಡಾಡಿದ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪ್ರತಿ ವರ್ಷ ಆಗಸ್ಟ 23ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನಾಗಿ ಆಚರಿಸವಂತೆ ಘೋಷಿಸಿದರು.

ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನದ ಅವಶ್ಯಕತೆಗಳು ಭಾರತದಂತಹ ದೇಶದಲ್ಲಿ ಸಧ್ಯ ಮಾಹಿತಿ ತಂತ್ರಜ್ಞಾನ, ಜಿ.ಪಿ.ಎಸ್(ಜಾಗತಿಕ ಸ್ಥಾನ ನಿರ್ಣಯ ವ್ಯವಸ್ಥೆ), ಜಾಗತಿಕ ದೂರವಾಣಿ ಸಂಪರ್ಕ ವ್ಯವಸ್ಥೆ, ಕೃಷಿ ಆಧಾರಿತ ಆಪ್‍ಗಳ ಬಳಕೆಗಾಗಿ, ಜನಸಂಖ್ಯೆ ಅಂದಾಜಿಸಲು, ಅರಣ್ಯ ಆವರಿಸಿದ ಪ್ರದೇಶಗಳನ್ನು ಅಳೆಯಲು, ವಾತಾವರಣದ ಮಾಹಿತಿ, ವಾತಾವರಣದ ವೈಪರಿತ್ಯಗಳ ಮುನ್ಸೂಚನೆ ನೀಡಲು, ಬಾಹ್ಯಾಕಾಶದ ಕೂತೂಹಲಗಳನ್ನು ಅರ್ಥೈಸಿಕ್ಕೂಳ್ಳಲು-ಸಂಶೋಧಿಸಲು, ನಮ್ಮ ಸೌರ ಮಂಡಲದ ಇತರ ಗ್ರಹಗಳಿಗೆ ತಲುಪಿ ನಮ್ಮನ್ನೆ ನಾವು ತಿಳಿದುಕೋಳ್ಳುವುದು ಇತ್ಯಾದಿ.

ಯಾವುದೇ ರಾಷ್ಟ್ರಿಯ ಆಚರಣೆಗಳಿಗೆ ಪ್ರತೀ ವರ್ಷ ಒಂದು ಘೋಷವಾಕ್ಯ ನೀಡಲಾಗುತ್ತದೆ, ಅದರಂತೆ ಈ ವರ್ಷದ ಘೋಷವಾಕ್ಯ “ ಚಂದ್ರನನ್ನು ಸ್ಪರ್ಶಿಸಿವಾಗ ಜೀವಗಳನ್ನು ಸ್ಪರ್ಶಿಸಿದ್ದು ಭಾರತೀಯ ಬಾಹ್ಯಾಕಾಶ ಇತಿಹಾಸದ ಸಾಧನೆ ” ಎಂಬುದಾಗಿದೆ.

ಭಾರತದ ಬಾಹ್ಯಾಕಾಶ ಇತಿಹಾಸವನ್ನು ಅವಲೋಕಿಸಿದಾಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಿದ ಚಂದ್ರಯಾನ ಪ್ರಯೋಗಗಳಲ್ಲಿ ಚಂದ್ರಯಾನ-3 ಸಾಧಿಸಿದ ಯಶಸ್ಸು ಭಾರತಕ್ಕೊಂದು ಮೈಲಿಗಲ್ಲು. ಚಂದ್ರಯಾನ 3ರ ಮೂಲ ಉದ್ದೇಶ ನಮಗೆ ಚಂದ್ರನ ಮೇಲ್ಮೈ, ಅಲ್ಲಿನ ವಾತಾವರಣ ಹಾಗೂ ಚಂದ್ರನ ಆಂತರಿಕ ವ್ಯವಸ್ಥೆಗಳನ್ನು ಅರ್ಥೈಸಿಕ್ಕೋಳ್ಳುವುದಾಗಿತ್ತು. ಅದನ್ನು ನಾವು ತಕ್ಕ ಮಟ್ಟಿಗೆ ಸಾಧಿಸಿದ್ದೇವೆ ಎಂಬ ತೃಪ್ತಿ ಇದೆ.

ಈ ಯೋಜನೆಯು ಅತೀ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗುವುದರೊಂದಿಗೆ ಚಂದ್ರನ ದಕ್ಷಿಣ ದ್ರುವದ ಮೇಲೆ ಯಶಸ್ವಿಯಾಗಿ ಸಾಪ್ಟಲ್ಯಾಂಡಿಂಗ್ ಮಾಡಿ ಭಾರತ ವಿಶ್ವದ ನಂ.1 ರಾಷ್ಟ್ರವಾಗಿದೆ ಹಾಗೂ ಚಂದ್ರನನ್ನು ಮುತ್ತಿಕ್ಕಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿದೆ.

ಚಂದ್ರನ ಮೇಲಿಳಿದ ವಿಕ್ರಮನಿಂದ ನಿಧಾನವಾಗಿ ಕೆಳಗಿಳಿದ ಪ್ರಜ್ಞಾನ ರೋವರ್ ಚಂದ್ರನಲ್ಲಿರುವ ಮಣ್ಣು, ಕಲ್ಲು ಮತ್ತು ವಾತಾವರಣದಲ್ಲಿಯ ಆಕ್ಸಿಜನ್, ಹೈಡ್ರೋಜನ್ ಹಾಗೂ ನೀರು, ಅನೇಕ ಖನಿಜಗಳಾದ ಲಿಥೀಯಂ, ಟಿಟ್ಯಾನಿಯಂ, ಕಬ್ಬಿಣ, ಬಂಗಾರ, ಬೆಳ್ಳಿಯಂತಹ ಹಲವಾರು ಲೋಹಗಳ ಇರುವಿಕೆಯನ್ನು ದೃಢಪಡಿಸಿದೆ. ಈ ಎಲ್ಲ ಸಂಶೋಧನೆಗಳು ಅತೀ ಕಡಿಮೆ ವೆಚ್ಚದಲ್ಲಿ ಅಂದರೆ ಕೇವಲ 630 ಕೋಟಿ ರೂಪಾಯಿಗಳಲ್ಲಿ ಆಗಿರುವುದು ಇನ್ನೊಂದು ಸಾಧನೆ.

ಇದೇ ರೀತಿ ಭಾರತವು ಇಸ್ರೋದ ಸಹಾಯದೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಮುಂದುವರೆಸಿ ಮಾನವನ ಜೀವನವನ್ನು ಇನ್ನಷ್ಟು ಅರ್ಥಪೂರ್ಣವಾಗುವಂತೆ ಮಾಡಲು ಉತ್ತೇಜಿಸುವುದೇ ಇಂದಿನ ಬಾಹ್ಯಾಕಾಶ ದಿನಾಚರಣೆಯ ಮಹತ್ವ ಹಾಗೂ ವಿಶೇಷ.

ಇಸ್ರೋದ ಯಶೋಗಾಥೆಯನ್ನು ಅವಲೋಕಿಸಿದಾಗ, 15ನೇ ಆಗಸ್ಟ 1969ರಂದು ವಿಕ್ರಮ ಸಾರಾಭಾಯಿಯವರ ನೇತೃತ್ವದಲ್ಲಿ ಸ್ಥಾಪಿತವಾದ ಇಸ್ರೋದ ಮೊದಲನೇ ಬಾಹ್ಯಾಕಾಶ ಯೋಜನೆಯೇ ಆರ್ ಏಸ್ – 1 ಅಂದರೆ ರೋಹಿಣಿ ಸಟಲೈಟ್-1. ಇದೊಂದು ಪ್ರಾಥಮಿಕ ಹಂತದ ಕೃತಕ ಉಪಗ್ರಹವಾಗಿದ್ದರೂ ಇದು ಸೂರ್ಯನಿಂದ ಭೂಮಿಗೆ ತಲುಪುವ ಶಕ್ತಿಯ ವಿಶ್ಲೇಷಣೆ, ಅದರ ಕಾಂತೀಯ ಬಲವನ್ನು, ಅಲ್ಲಿರುವ ತಾಪವನ್ನುಅಳೆಯುವುದಾಗಿತ್ತು , ಇದನ್ನು ಹಾರಿ ಬಿಟ್ಟಿದ್ದು 18ನೇ ಜುಲೈ 1980ರಂದು. ಅಲ್ಲಿಂದ ಇಲ್ಲಿಯವರೆಗೆ ಭಾರತೀಯ ಇಸ್ರೋ ಸಂಸ್ಥೆ ಸರಿ ಸುಮಾರು 150 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸಿದೆ. ವಿಪರ್ಯಾಸ ಎಂಬಂತೆ ಸಧ್ಯದ ಯಾವ ಪಠ್ಯ ಪುಸ್ತಕಗಳಲ್ಲಿ ಬಾಹ್ಯಾಕಾಶ ವಿಜ್ಞಾನ-ತಂತ್ರಜ್ಞಾನ ಕುರಿತು ಪಾಠಗಳಿಲ್ಲ ಆದ್ದರಿಂದ ಬರುವ ದಿನಮಾನಗಳಲ್ಲಿ ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಪ್ರಚಾರ ಪಡಿಸುವದು ಹಾಗೂ ನಾಗರಿಕರಲ್ಲಿ ಆಸಕ್ತಿ ಬೆಳೆಸುವಂತೆ ಮಾಡುವುದೇ ಇಂದಿನ ದಿನಾಚರಣೆಯ ಪ್ರಾಮುಖ್ಯತೆಯಾಗಿದೆ.

ಜತೆಗೆ ಇಸ್ರೋದ ಶ್ರೇಯೋಭಿವೃಧ್ಧಿಗಾಗಿ ಶ್ರಮಿಸಿದ ವಿಜ್ಞಾನಿಗಳಾದ ಯು.ಆರ್.ರಾವ್, ಎ.ಎಸ್. ಕಿರಣಕುಮಾರ, ಕೋಪ್ಪಿಲಿಲ್ಲಿ ರಾಧಾಕೃಷ್ಣ, ಎ.ಪಿ.ಜೆ, ಅಬ್ದುಲ್ ಕಲಾಂ, ಕೆ, ಕಸ್ತೂರಿರಂಗನ್, ಮಂಗಳಾ ಮಣಿ, ನಂಬಿನಾರಾಯಣ ಇನ್ನೂ ಹಲವಾರು ದಿಗ್ಗಜರನ್ನು ನೆನೆದು ಅವರನ್ನು ಅನುಕರಿಸುವಂತೆ ಯುವಕರಿಗೆ ಪ್ರೇರಣೆ ನೀಡುವುದಾಗಿದೆ.

ಆಚರಣೆ ಹೇಗಿರಬೇಕು: ಈ ಸಾರೆಯ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ನೀಲ ನಕ್ಷೆಯನ್ನು 29ನೇ ಜುಲೈ 2023 ರಿಂದ 23ನೇ ಆಗಸ್ಟ 2024 ರ ವರೆಗೆ ದೇಶದಾದ್ಯಂತ ಆಚರಿಸಲು ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರ ಮತ್ತು ಬಿಹಾರದ ದ್ರವ ಉಡ್ಡಯನ ವ್ಯವಸ್ಥೆಯ ಕೇಂದ್ರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‍ನ ಸಹಯೋಗದೋಂದಿಗೆ ನಡೆಸಲು ಸಲಹೆ ನೀಡಲಾಗಿದೆ. ಇವುಗಳಲ್ಲಿ ನುರಿತ ತಜ್ಞರಿಂದ ವಿದ್ಯಾರ್ಥಿಗಳಿಗೆ-ಸಾರ್ವಜನಿಕರಿಗೆ ಬಾಹ್ಯಾಕಾಶ ತಂತ್ರಜ್ಞಾನ ಕುರಿತು ರಸಪ್ರಶ್ನೆ, ಬಾಹ್ಯಾಕಾಶ ವಿಜ್ಞಾನ ವಸ್ತು ಪ್ರದರ್ಶನ, ಚರ್ಚಾ ಸ್ಪರ್ಧೆ ಹಾಗೂ ಉಪನ್ಯಾಸ, ಬಾಹ್ಯಾಕಾಶ ಕುರಿತು ಚಲನ ಚಿತ್ರ ಪ್ರದರ್ಶನ, ಆಕಾಶ ವಿಕ್ಷಣೆ, ತಾರಾಲಯಗಳ ವಿಕ್ಷಣೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿದೆ.

ಇಂದು ವಿಜ್ಞಾನ ತಂತ್ರಜ್ಞಾನ ಕೇವಲ ಹಣಕ್ಕಾಗಿ ಎಂಬುದು ಬಿಂಬಿತವಾಗಿದೆ, ಇದಕ್ಕೆ ಕಾರಣ ಮಾಹಿತಿ ತಂತ್ರಜ್ಞಾನ, ಕೃತಕ ಬುಧ್ಧಿಮತ್ತೆಯಂತಹ ವಿಜ್ಞಾನ ಶಾಖೆಗಳು ಅತೀಯಾಗಿ ಅಭಿವೃಧ್ಧಿ ಹೊಂದುತ್ತಿವೆ. ಆದರೆ ಇವುಗಳ ಅಭಿವೃಧ್ಧಿಗೆ ಬೇಕಾದ ಅಂತರ್ಜಾಲ ವ್ಯವಸ್ಥೆ ನಿರ್ವಹಿಸುತ್ತಿರುವ ಕೃತಕ ಉಪಗ್ರಹಗಳು ಬಾಹ್ಯಾಕಾಶ ತಂತ್ರಜ್ಞಾನ ವಿಜ್ಞಾನದ ಕೊಡುಗೆ ಎಂಬುದನ್ನು ನಾವು ಮರೆಯುತ್ತಿದ್ದೆವೆ.

“ಮಾನವಿತೆಯ ಸೇವೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ” ಇದು ಇಸ್ರೋನ ಘೋಷವಾಕ್ಯ”. ಈ ಘೋಷ ವಾಕ್ಯ ನಿರೂಪಿಸುವುದಕ್ಕೆ ಇಂದು ಮಾನವನ ಉಗಮ, ವಿಕಾಸ, ಅಳಿವು ಉಳಿವುಗಳನ್ನು ಅಥೈಸಿಕ್ಕೂಳಲು ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಅವಶ್ಯಕವಾಗಿ ಬೇಕು ಮತ್ತು ಬೆಳೆಯಬೇಕು ಎಂಬುದನ್ನು ಮರೆಯುವಂತಿಲ್ಲ.

ಲೇಖಕರು
ರಾಮಚಂದ್ರ ಮೋನೆ
ವಿಜ್ಞಾನ ಶಿಕ್ಷಕರು,
ವಿದ್ಯಾದಾನ ಸಮಿತಿ ಬಾಲಕರ ಪ್ರೌಢ ಶಾಲೆ. ಗದಗ


Spread the love

Leave a Reply

Your email address will not be published. Required fields are marked *