ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಸಭೆಗೆ ಹೋಗಿದ್ದ ಅಶೋಕ ಗಸ್ತಿ: ಕೊರೋನಾಗೆ ಬಲಿ
1 min readಬೆಂಗಳೂರು: ಕಳೆದ ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯಸಭಾ ಸದಸ್ಯರಾಗಿ ನೇಮಕವಾಗಿದ್ದ ಬಿಜೆಪಿಯ ಅಶೋಕ ಗಸ್ತಿ ಕೊರೋನಾ ಪಾಸಿಟಿವ್ ನಿಂದ ಗುಣಮುಖರಾಗದೇ ನಿಧನರಾಗಿದ್ದಾರೆ.
ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗುರಿನ ಅಶೋಕ ಗಸ್ತಿ, ಕೊರೋನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 55 ವರ್ಷದ ಬಿಜೆಪಿಯ ಕಟ್ಟಾಳು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಎಬಿವಿಪಿಯಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದ ಗಸ್ತಿ, ಆರ್ ಎಸ್ ಎಸ್ ಮತ್ತು ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದರು. ವಿಧಾನಸಭೆಯಿಂದ ರಾಜ್ಯಸಭೆಗೆ ಜೂನನಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದ ಇವರನ್ನ ಬಿಜೆಪಿ ಕಣಕ್ಕೀಳಿಸಿ, ರಾಜ್ಯಸಭೆಗೆ ಕಳಿಸಿತು.