ಸಂವಿಧಾನದತ್ತ ಮೀಸಲಾತಿಗಾಗಿ ರಾಜ್ಯಸಭಾ ಸದಸ್ಯರಿಗೆ ಮನವಿ
ರಾಯಚೂರು: ಕರ್ನಾಟಕ ಅಸ್ಪೃಷ್ಯ ಸಮಾಜಗಳ ಮಹಾಸಭಾ ರಾಯಚೂರು ವತಿಯಿಂದ ರಾಜ್ಯ ಸಭಾ ಸಂಸದ ಅಶೋಕ ಗಸ್ತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಮನವಿ ಪತ್ರ ನೀಡಿದರು.
ಸಂವಿಧಾನದತ್ತ ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಸಂಸದರು ಮನವಿಯ ಪ್ರಮುಖ ಅಂಶಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಜಿಲ್ಲಾಧ್ಯಕ್ಷ ರವೀಂದ್ರನಾಥ ಪಟ್ಟಿ ಮಾತನಾಡಿ, ನೊಂದ ಸಮುದಾಯಗಳ ಧ್ವನಿಯ ಬಗ್ಗೆ ವಿವರಿಸಿದರು.
ಪ್ರಮುಖ ಮುಖಂಡರುಗಳಾದ ಎಂ.ವಿರುಪಾಕ್ಷಿ, ರವೀಂದ್ರನಾಥ ಪಟ್ಟಿ, ಅಂಬಣ್ಣ ಅರೋಲಿ, ನರಸಪ್ಪ ದಂಡೂರ, ಭೀಮರಾಜ, ಬಾಲಚಂದ್ರ ಮಸ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.