ರಾಜ್ಯಪಾಲರ ಸಂಬಂಧಿಕರ “ಮದುವೆಗೆ ಹೋಗಿದ್ದ” ಬಿಜೆಪಿ ನಾಯಕರು…

ಮದ್ಯಪ್ರದೇಶ: ರಾಜ್ಯಪಾಲರ ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲು ಭಾರತೀಯ ಜನತಾ ಪಕ್ಷದ ಹಲವು ನಾಯಕರು ಇಂದು ಇಂದೋರ್‌ಗೆ ಆಗಮಿಸಿದ್ದು, ಇಲ್ಲಿಂದ ನವದೆಹಲಿಗೆ ತೆರಳಿದ್ದಾರೆಂದು ಗೊತ್ತಾಗಿದೆ.
ಭಾರತೀಯ ಜನತಾ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮರಳಿ ಬಂದ ನಂತರ, ಹಲವು ಬಿಜೆಪಿ ನಾಯಕರ ಅವರು ತೆರಳಿದ್ದರೆಂದು ಗೊತ್ತಾಗಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ, ಮಾಜಿ ಸಚಿವ ಶಂಕರ್ ಪಾಟೀಲಮುನೇನಕೊಪ್ಪ ಅವರು ಇಂದೋರ್‌ಗೆ ತೆರಳಿ ಮದುವೆಯಲ್ಲಿ ಭಾಗವಹಿಸಿದ್ದರು.
ಇಂದು ಕಾರ್ಯಕ್ರಮ ಮುಗಿದ ನಂತರ ಹಲವು ದೇವಸ್ಥಾನಗಳಿಗೆ ನಾಯಕರು ತೆರಳಿ, ಆಶೀರ್ವಾದ ಪಡೆದರೆಂದು ಗೊತ್ತಾಗಿದೆ.