ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಕೊರೋನಾಗೆ ಬಲಿ…!

ಕಾರವಾರ: ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೂ ಧೂಳಿ ಅವರು ಇಂದು ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಇವರು ಕೊರೋನಾದಿಂದ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷರಾಗಿದ್ದ ಧೂಳಿ, ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ರ, ಅಷ್ಟೇ ಅಲ್ಲ, ಕೊರೋನಾ ವೈರಸ್ ಕೂಡಾ ತಗುಲಿಕೊಂಡಿದ್ದರಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
58 ವರ್ಷ ವಯಸ್ಸಿನ ರಾಜು ಧೂಳಿ ಅವರು ಹಿಂದೂ ಸಂಘಟನೆಯಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಲ್ಲದೇ ಬಿಜೆಪಿಯನ್ನ ಬೆಳೆಸುವುದಕ್ಕಾಗಿ ಹಗಲಿರುಳು ಶ್ರಮಿಸಿದ್ದರು. ಇವರ ನಿಧನದಿಂದ ಈ ಭಾಗದಲ್ಲಿ ಬಹುದೊಡ್ಡ ಶಕ್ತಿಯನ್ನ ಪಕ್ಷ ಕಳೆದುಕೊಂಡಂತಾಗಿದೆ.