Karnataka Voice

Latest Kannada News

’15’ ಮತ್ತೂ ’30’ತಿಂಗಳ ಎರಡು ಮಕ್ಕಳ ತಂದೆಯಾಗಿದ್ದ TV5 ಕ್ಯಾಮರಾಮನ್ “ರಾಜು” ಇನ್ನಿಲ್ಲ…

Spread the love

ಧಾರವಾಡ: ಸೌಮ್ಯ ಸ್ವಭಾವದ ಮೀಡಿಯಾವನ್ನ ಅತೀವ ಪ್ರೀತಿಸುತ್ತ ಬಡತನದಲ್ಲೇ ಬದುಕು ಕಟ್ಟಿಕೊಳ್ಳುವ ಕನವರಿಕೆ ಕಾಣುತ್ತಿದ್ದ ಟಿವಿ5 ಕ್ಯಾಮರಾಮನ್ ರಾಜು ಅಂಗಡಿ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.

ಸಣಕಲು ದೇಹ, ಕಣ್ಣಿಗೊಂದು ಕನ್ನಡಕ ಹಾಕಿಕೊಂಡು ಹಿರಿಯರಿಗೆ ಗೌರವ ಕೊಡುತ್ತ ಕ್ಯಾಮರಾದಿಂದಲೇ, ಜೀವನ ಸಾಗಿಸಬೇಕು ಮತ್ತೂ ಸಾಮಾಜಿಕವಾಗಿ ಸಹಾಯ ಮಾಡಬೇಕೆಂಬ ಕನಸು ಕಂಡಿದ್ದ ರಾಜು ಅಂಗಡಿ, ಪತ್ನಿ ಹಾಗೂ ಎರಡು ಪುಠಾಣಿ ಮಕ್ಕಳನ್ನ ಅಗಲಿದ್ದಾರೆ.

ಹುಬ್ಬಳ್ಳಿ ಧಾರವಾಡ ನಗರದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದ ರಾಜು, ತನ್ನ 34ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

ಕೆಲ ದಿನಗಳ ಹಿಂದಷ್ಟೇ, ತುಂಗಭದ್ರಾ ನದಿಯ ಆಣೆಕಟ್ಟು ಸಮಸ್ಯೆಯಾದಾಗ ಹಗಲು ರಾತ್ರಿ ಅಲ್ಲಿಯೇ ಇದ್ದು ರಾಜು, ಅತ್ಯುತ್ತಮ ವೀಡಿಯೋಗಳನ್ನ ರಾಜ್ಯದ ಜನರಿಗೆ ಟಿವಿ5 ಮೂಲಕ ತೋರಿಸಿದ್ದಿದೆ.

ಕ್ಯಾಮರಾಮನ್ ರಾಜು ಅಂಗಡಿಯವರ ನಿಧನಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.


Spread the love

Leave a Reply

Your email address will not be published. Required fields are marked *