ಶಿವಳ್ಳಿ ಗ್ರಾಪಂನ ಮೊದಲ ಅಧ್ಯಕ್ಷ “ರಾಜೇಸಾಬ ಮುಲ್ಲಾ” ಇನ್ನಿಲ್ಲ….
1 min readಧಾರವಾಡ: ಮಂಡಳ ಪಂಚಾಯತಿಯಿಂದ ಬದಲಾಗಿ ಗ್ರಾಮ ಪಂಚಾಯತಿಯಾದ ನಂತರ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಪಂನ ಮೊದಲ ಅಧ್ಯಕ್ಷರಾಗಿದ್ದ ರಾಜೇಸಾಬ ಹುಸೇನಸಾಬ ಮುಲ್ಲಾ, ಇಂದು ತಮ್ಮ 65ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಪ್ರೊ.ನಂಜುಂಡಸ್ವಾಮಿ ಅವರು ಶಾಸಕರಾಗಿದ್ದ ಸಮಯದಲ್ಲಿ ಶಿವಳ್ಳಿ ಗ್ರಾಮ ಪಂಚಾಯತಿಗೆ ರಾಜೇಸಾಬ ಹುಸೇನಸಾಬ ಮುಲ್ಲಾ ಅವರು ಬಹುಮತದಿಂದ ಆಯ್ಕೆಯಾಗಿ ಅಧ್ಯಕ್ಷರಾಗಿದ್ದರು.
ರಾಜೇಸಾಬ ಮುಲ್ಲಾ ಅವರು ಗ್ರಾಮದಲ್ಲಿ ತಮ್ಮ ವ್ಯಕ್ತಿತ್ವದಿಂದ ಪ್ರತಿಯೊಬ್ಬರಿಗೂ ಚಿರಪರಿಚಿತರಾಗಿದ್ದರು. ದಶಕಗಳ ಕಾಲ ರಾಜೇಸಾಬ ಮುಲ್ಲಾ ಅವರ ಹೆಜ್ಜೆ ಮಜಲುಗಳು ಪ್ರತಿಯೊಬ್ಬರ ಮನದಲ್ಲಿ ಈಗಲೂ ಅಚ್ಚಳಿಯದೇ ಉಳಿದಿವೆ.
ರಾಜೇಸಾಬ ಮುಲ್ಲಾ ಅವರ ನಿಧನದಿಂದ ಗ್ರಾಮವೂ ಹಿರಿಯ ಜೀವವೊಂದನ್ನ ಕಳೆದುಕೊಂಡಂತಾಗಿದೆ. ಓರ್ವ ಗಂಡು ಮಗ, ಇಬ್ಬರು ಹೆಣ್ಣುಮಕ್ಕಳು ಹಾಗೂ ಅಪಾರ ಬಂದು ಬಳಗವನ್ನ ಅಗಲಿದ್ದಾರೆ.
ರಾಜೇಸಾಬ ಮುಲ್ಲಾ ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ಶಿವಳ್ಳಿ ಗ್ರಾಮದಲ್ಲಿ ನಡೆಯಲಿದೆ.