ರಜತ ಕೊರಳಲ್ಲಿರೋದು “ಹುಲಿ ಉಗರಲ್ಲ”… ಮತ್ತೇನದು ಗೊತ್ತಾ…!?

ರಜತ ಉಳ್ಳಾಗಡ್ಡಿಮಠ ಹೆಸರನ್ನ ಒಂದಿಲ್ಲಾ ಒಂದು ರೀತಿಯಲ್ಲಿ ಚಲಾವಣೆ ಮಾಡಲು ವಿವಾದವನ್ನ ಸೃಷ್ಟಿ ಮಾಡಲಾಗುತ್ತಿದೆ
ಹುಬ್ಬಳ್ಳಿ: ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ ಅವರ ಬಂಧನದ ನಂತರ ರಾಜ್ಯದಲ್ಲೀಗ ಹುಲಿ ಉಗರಿನದ್ದೆ ಚರ್ಚೆ ನಡೆದಿದ್ದು, ಅವರಿವರ ಕೊರಳು ನೋಡಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಮುಖಂಡ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ಅಳಿಯ ರಜತ ಉಳ್ಳಾಗಡ್ಡಿಮಠ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಇದೆ ಎಂಬ ಊಹಾಪೋಹ ಹೆಚ್ಚಾಗಿತ್ತು. ಆದರೆ, ಅದು ನಿಜವಾದ ಹುಲಿ ಉಗುರು ಅಲ್ಲವೆಂದು ಗೊತ್ತಾಗಿದೆ.
ಈ ಬಗ್ಗೆ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿ ನೀಡಿದ ರಜತ ಉಳ್ಳಾಗಡ್ಡಿಮಠ, ತಮ್ಮ ಕೊರಳಲ್ಲಿ ಇರುವುದು ಸೆಂತೇಟಿಕ್‌ನಿಂದ ಮಾಡಲಾದ ಹುಲಿ ಉಗುರಿನ ಆಕಾರದ ಪೆಂಡೆಂಟ್ ಎಂದಿದ್ದಾರೆ.
ರಜತ ಉಳ್ಳಾಗಡ್ಡಿಮಠ ಹೇಳಿಕೆ…
ನನ್ನ ಮದುವೆ ಸಮಯದಲ್ಲಿ ನಾನು ಧರಿಸಿದ್ದ ಒಂದು ಪೆಂಡೆಂಟ್ ನಿಜವಾದ ಹುಲಿ ಉಗುರಿನಿಂದ ಮಾಡಿದ್ದಲ್ಲ. ಅದು ಫೈಬರ್ ಮಿಶ್ರಿತ ವಸ್ತುವಿನಿಂದ ಮಾಡಿದ ಪೆಂಡೆಂಟ್ ಆಗಿದ್ದು, ಈ ಬಗ್ಗೆ ಯಾವುದೇ ಗೊಂದಲಗಳು ಬೇಡ.
ನಾನು ಮೂಲತಃ ಒಬ್ಬ ಗಾಂಧೀವಾದಿ, ಅಹಿಂಸಾವಾದಿ. ಹೀಗಿರುವಾಗ ಒಂದು ಪ್ರಾಣಿಯನ್ನು ಹಿಂಸಿಸಿ ಶೋಕಿ ಮಾಡುವ ಹರಕತ್ತಾಗಲಿ, ಅನಿವಾರ್ಯತೆಯಾಗಲಿ ನನಗೆ ಬಂದಿಲ್ಲ, ಬರುವುದಿಲ್ಲ ಕೂಡ.