ಸಂಸ್ಥಾನದ “ಮದ್ದಿಗೆ ಸಗಣಿ” ಬೆರೆಸಿದ ಹಾಗೇ ನನ್ನ ಜೀವನದಲ್ಲೂ “ಸಗಣಿ” ಕಲಿಸಿದ್ರು ಜಗದೀಶ ಶೆಟ್ಟರ್: ರಜತ್ ಆಕ್ರೋಶ…

ಹುಬ್ಬಳ್ಳಿ: ವೀರರಾಣಿ ಕಿತ್ತೂರ ಚೆನ್ನಮ್ಮನವರ ಮದ್ದು-ಗುಂಡುಗಳ ಕೋಣೆಯಲ್ಲಿ ಮಲ್ಲಪ್ಪ ಶೆಟ್ಟರು ಸಗಣಿ ಬೆರೆಸಿದ ಹಾಗೇ ನನ್ನ ಜೀವನದಲ್ಲಿ ಜಗದೀಶ್ ಶೆಟ್ಟರ್ ಸಗಣಿ ಬೆರೆಸಿದ್ರು ಎಂದು ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ನೋವಿನಿಂದ ಹೇಳಿಕೊಂಡರು.
ಹುಬ್ಬಳ್ಳಿಯ ಗಿರಣಿಚಾಳದಲ್ಲಿ ಆಯೋಜನೆಗೊಂಡಿದ್ದ ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಜತ ಮಾತನಾಡಿದರು.
ವೀಡಿಯೋ ಇಲ್ಲಿದೆ…
ಕಾಂಗ್ರೆಸ್ ಪಕ್ಷಕ್ಕೆ ಬಂದು ತಮಗೆ ಅನ್ಯಾಯ ಆಯಿತು. ಇಲ್ಲದೇ ಇದ್ದರೇ ನನ್ನನ್ನ ವಿಧಾನಸಭೆಗೆ ಕಳಿಸಲು ಜನತೆ ಸಿದ್ಧರಾಗಿದ್ದರೆಂದು ರಜತ ಅಭಿಪ್ರಾಯ ಹೇಳಿಕೊಂಡರು.