“ರಜತ ಸಂಭ್ರಮ”ಕ್ಕೆ ಹೊರ ಬರದಂತೆ ಕೋರ್ಟಗೆ ಮೊರೆ… !?

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಅವರ ‘ರಜತ ಸಂಭ್ರಮ’ದ ಪೋಸ್ಟರ್ ಸಿನೇಮಾ ಆಗುತ್ತಿದೆ ಎಂಬ ವಿಷಯ ಹೊರ ಬೀಳುತ್ತಿದ್ದ ಹಾಗೇ, ಅದರ ವಿರುದ್ಧ ಕೋರ್ಟಗೆ ಮೊರೆ ಹೋಗಿದ್ದಾರೆಂದು ಹೇಳಲಾಗಿದೆ.

ವಾಣಿಜ್ಯನಗರಿಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ‘ರಜತ ಸಂಭ್ರಮ’ದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಪಾತ್ರವೂ ಬರಲಿದೆ ಎಂದು ಗೊತ್ತಾದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ.
ಸೆಂಟ್ರಲ್ ಕ್ಷೇತ್ರದ ರಾಜಕೀಯದಲ್ಲಿ ‘ರಜತ ಸಂಭ್ರಮ’ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಸಿನೇಮಾದಲ್ಲಿ ಹಸಿ ಹಸಿ ರಾಜಕೀಯ ಸತ್ಯಗಳು ಹೊರ ಬೀಳಲಿವೆ.
ಸೆಂಟ್ರಲ್ ಕ್ಷೇತ್ರದಲ್ಲಿ ನಡೆದ ಮತ್ತೂ ನಡೆಯುತ್ತಿರುವ ರಾಜಕೀಯ ಕಹಿ ಸತ್ಯಗಳು ಇರಲಿದೆ ಎಂದು ಹೇಳಲಾಗಿದ್ದು, ಅದೇ ಕಾರಣಕ್ಕೆ ಕೋರ್ಟ್ ಗೆ ಮೊರೆ ಹೋಗಿ, ಯಾವುದೇ ಥರದಲ್ಲಿ ಸಿನೇಮಾ ಮಾಡದಂತೆ ಕೇಳಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.