ಬ್ಲೂಫಿಲ್ಮ ನೋಡಿ ಡಿಸಿಎಂ ಆಗಿದ್ದು- ಜೈಲು ಪಾಲಾಗಿದ್ದ ಯಡಿಯೂರಪ್ಪ ಸಿಎಂ ಆಗಿದ್ದು ಬಿಜೆಪಿಯಲ್ಲೇ ಅಲ್ವಾ: ಶೆಟ್ಟರ-ಜೋಶಿಗೆ ಪ್ರಶ್ನೆ
ಹುಬ್ಬಳ್ಳಿ: ಒಂದ್ ಟೈಮ್ನಲ್ಲಿ ಜೈಲಿನಲ್ಲಿದ್ದು ಗಡಿಪಾರಾಗಿದ್ದ ಅಮಿತ್ ಶಾ ಈಗ ಕೇಂದ್ರ ಗೃಹಸಚಿವರಾಗಿದ್ದಾರೆ. ಜೈಲು ಸೇರಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಸದನದೊಳಗೆ ಬ್ಲೂಪಿಲಂ ನೋಡಿ ಮಂತ್ರಿ ಸ್ಥಾನ ಕಳೆದುಕೊಂಡವರು ಈಗ ಉಪಮುಖ್ಯಮಂತ್ರಿ ಆಗಿದ್ದಾರೆ. ಗಣಿಲೂಟಿ ಮಾಡಿದವರು ಮಂತ್ರಿಯಾಗಿದ್ದಾರೆ. ಮೊದಲು ನಿಮ್ಮ ಬುಡ ಸರಿಯಾಗಿ ತೊಳ್ಕೊಳಿ ಆಮೇಲೆ ಶಿವಕುಮಾರ್ ಬಗ್ಗೆ ಯೋಚಿಸಿ ಎಂದು ಕೆಪಿಸಿಸಿ ಸಂಯೋಜಕ ರಜತ ಉಳ್ಳಾಗಡ್ಡಿಮಠ ಹೇಳಿದ್ದಾರೆ.
ಸಚಿವ ಜಗದೀಶ ಶೆಟ್ಟರ ಮತ್ತು ಪ್ರಲ್ಹಾದ ಜೋಶಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ವಿರುದ್ಧ ಮಾತನಾಡಿದ ಬೆನ್ನಲ್ಲೇ ರಜತ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಜಾಮೀನು ಪಡೆದಿದ್ದಾರೆ ಎಂದರೆ ಅದನ್ನೇನಾದ್ರೂ ಅಮಿತ್ ಶಾ ಮೋದಿ ಅಥವಾ ನೀವೇನಾದ್ರೂ ಸೆಂಗ್ಷನ್ ಮಾಡಿದ್ದೀರಾ ? ನಿಮಗೇನಾದ್ರೂ ಆ ತರದ ಯೋಗ್ಯತೆ ಇದೆಯಾ ? ಡಿಕೆಶಿಯವರಿಗೆ ಜಾಮೀನು ನೀಡಿದ್ದು ಭಾರತದ ಸರ್ವೋಚ್ಚ ನ್ಯಾಯಾಲಯ. ಕಾನೂನು ಯಾರಪ್ಪನ ಮನೆ ಸೊತ್ತಲ್ಲ ಡಿಕೆಶಿಯವರು ಈ ದೇಶದ ಕಾನೂನಿಗನುಗುಣವಾಗಿ ಬದುಕುತಿದ್ದಾರೆ ಅದನ್ನ ನಿಮ್ಮಂತವರಿಂದ ಕಲಿಯಬೇಕಾಗಿಲ್ಲ.
ಬೆಂಗಳೂರಿನಲ್ಲಿ ನಡೆದ ಗಲಬೆ ವಿಚಾರದಲ್ಲಿ ಅಮಾಯಕರನ್ನು ಬಂದಿಸಿ ವಿನಾಕಾರಣ ತೊಂದರೆ ಕೊಡಬೇಡಿ ಮತ್ತು ಗಲಭೆಯನ್ನು ಕಾಂಗ್ರೆಸ್ ತೆಲೆಗೆ ಕಟ್ಟಲು ಯತ್ನಿಸಬೇಡಿ ಎಂದು ಡಿಕೆಶಿ ಪೊಲೀಸ್ ಕಮಿಷನರ್ ಗೆ ಹೇಳಿದ್ದಾರೆ. ಡಿಕೆಶಿಯವರು ಜಾಮೀನು ಪಡೆದಿದ್ದಾರೆ ಎಂದ ಮಾತ್ರಕ್ಕೆ ಏನೂ ಮಾತಾಡಬಾರದೆಂದು ನ್ಯಾಯಾಲಯ ಆದೇಶ ಮಾಡಿದೆಯಾ.
ಕೆಲ ಸಂಘಟನೆಗಳ ವಿರುದ್ಧದ ಮೊಕದ್ದಮೆಗಳನ್ನು ವಾಪಸ್ ಪಡೆಯುತ್ತೇವೆ ಎಂದು ಬಹಿರಂಗವಾಗೇ ರಾಜ್ಯದ ಗೃಹಸಚಿವರು ಉಡುಪಿಯಲ್ಲಿ ಗುಸುಗುಟ್ಟಿದ್ದಾರಲ್ಲ ಒಂದೊಂದು ಧರ್ಮಕ್ಕೆ ಒಂದೊಂದು ಕಾನೂನು ಪಾಲನೆ ಮಾಡುವ ನಿಮ್ಮಂತವರಿಂದ ಡಿಕೆಶಿ ಕಲಿಯುವುದೇನೂ ಇಲ್ಲ. ನಿಮ್ಮ ಪ್ರಕಾರ ಒಬ್ಬ ವ್ಯಕ್ತಿ ಮಂಗಳೂರು ವಿಮಾನ ನಿಲ್ಲಾಣಕ್ಕೆ ಹುಸಿಬಾಂಬ್ ಕರೆ ಮಾಡಿದ್ರೆ ಅವನೊಬ್ಬ ಕುಡುಕ ಅದೇ ನಿಲ್ದಾಣದಲ್ಲಿ ಹಿಂದೂ ವ್ಯಕ್ತಿ ಬಾಂಬಿಟ್ರೆ ಮಾನಸಿಕ ಅಸ್ವಸ್ತನೆಂದು ಪರಿಗಣಿಸುತ್ತೀರಿ. ಶೃಂಗೇರಿ ಶಂಕರಾಚಾರ್ಯರರ ಪ್ರತಿಮೆಗೆ ಮುಸ್ಲಿಂ ಧರ್ಮದ ಬ್ಯಾನರ್ ಹಾಕಿದ ಹಿಂದೂ ವ್ಯಕ್ತಿ ಕುಡುಕನಾಗಿಬಿಡುತ್ತಾನೆ. ಹಾಗಾಗಿ ಬೆಂಗಳೂರಿನ ಗಲಬೆ ವಿಚಾರದಲ್ಲಿ ಅಮಾಯಕರಿಗೆ ನಿಮ್ಮಂತವರ ಮಾತು ಕೇಳಿ ತೊಂದರೆ ಕೊಡಬೇಡಿ ಎಂದು ಕಮೀಷನರ್ಗೆ ತಿಳಿಹೇಳಿದ್ದಾರೆ ಅಷ್ಟೇ ಎಂದು ಉಳ್ಳಾಗಡ್ಡಿಮಠ ಹೇಳಿದ್ದಾರೆ.