ಚೀನಾ ದಾಳಿ: ಪ್ರಧಾನಿ ಮೌನವೇಕೆ: ರಜತ ಉಳ್ಳಾಗಡ್ಡಿಮಠ ಪ್ರಶ್ನೆ
1 min readಹುಬ್ಬಳ್ಳಿ: ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ ದಾಳಿಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ಧಾರೆ. ಈ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿರುವ ಕೆಪಿಸಿಸಿ ಸಂಯೋಜಕ ರಜತ್ ಉಳ್ಳಾಗಡ್ಡಿಮಠ, ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿರುವುದೇಕೆ ? ಎಂದು ಪ್ರಶ್ನಿಸಿದ್ಧಾರೆ.
ಭಾರತದ ಮೇಲೆ ಚೀನಾ ನಡೆಸಿದ ದಾಳಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ಧಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಕುರಿತು ನನಗಾದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಎಲ್ಲಾ ಪ್ರೀತಿ ಪಾತ್ರರಿಗೆ ಸಂತಾಪ ಸೂಚಿಸುತ್ತೇನೆ. ಈ ಸಂಕಷ್ಟದ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಮೋದಿಯೇಕೆ ಮುಚ್ಚಿಡುತ್ತಿದ್ದಾರೆ ? ಆಗಿದ್ದು ಆಯ್ತು, ಈಗ ಏನಾಗುತ್ತಿದೆ ಎಂದು ನಮಗೆ ಹೇಳಿ. ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಗೆ ಎಷ್ಟು ಧೈರ್ಯ ? ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಚೀನಾಗೆ ಎಷ್ಟು ಧೈರ್ಯ ? ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಸದ್ಯದ ವಸ್ತುಸ್ಥಿತಿ ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯ ಮಾಡಿದ್ದಾರೆ. ಭಾರತ ಮತ್ತು ಚೀನಾ ನಡುವೆ ಕಾಳಗ ಏರ್ಪಟ್ಟಿದೆ. ಇಲ್ಲಿನ ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಉಭಯ ರಾಷ್ಟ್ರಗಳ ನಡುವಿನ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ದೇಶದ ಪ್ರಧಾನಿ ಮೌನವಾಗಿ ಕುಳಿತರೆ ನಮ್ಮ ದೇಶದಲ್ಲಿನ ಸಾಮಾನ್ಯಜನ ಏನು ಎಂದು ತಿಳಿದುಕೊಳ್ಳಬೇಕು ಸೈನಿಕರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಅವರಿಗೆ ಅವರ ಕುಟುಂಬಕ್ಕೆ ಧೈರ್ಯವನ್ನು ಕೊಡುವಂತ ಸಂದರ್ಭದಲ್ಲಿ ದೇಶದ ಪ್ರಧಾನಿ ಮೌನವಹಿಸಿದರೆ ದೇಶಕ್ಕೆ ಆಪತ್ತು. ಕಾಂಗ್ರೆಸ್ ಪಕ್ಷ ಸೈನಿಕರು ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಿಲ್ಲ ಸರ್ಕಾರದ ಪರವಾಗಿ ಇರುತ್ತೇವೆ ಸರ್ಕಾರ ಏನೇ ನಿರ್ಣಯ ತೆಗೆದುಕೊಂಡರು ಅದರ ಪರವಾಗಿ ಇರುತ್ತೇವೆ ಇಷ್ಟೆಲ್ಲಾ ಸರ್ವ ಪಕ್ಷದವರು ಬೆಂಬಲ ಸೂಚಿಸಿದರು 56 ಇಂಚಿನ ಸ್ವಯಂಘೋಷಿತ ಸರ್ಜಿಕಲ್ ಸ್ಟ್ರೈಕ್ ಪಿತಾಮಹ ಸುಮ್ಮನಿರುವುದೇಕೆ ಇದೇನಾ ನಿಮ್ಮ ಸೈನಿಕರಿಗೆ ಕೊಡುತ್ತಿರುವ ಗೌರವ . ಅವರ ಕುಟುಂಬಕ್ಕೆ ಕೊಡುತ್ತಿರುವ ಗೌರವ ಎಂದು ರಜತ ಪ್ರಶ್ನಿಸಿದ್ದಾರೆ.