ರಜನಿಕಾಂತ್ ಹೊಸ ಪಕ್ಷ.. ?

ಚೆನೈ: ದಕ್ಷಿಣ ಭಾರತದ ದಿಗ್ಗಜ ನಟ ರಜನಿಕಾಂತ್ ಏಪ್ರೀಲ್ ಕೊನೆಯ ವಾರದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷವನ್ನ ಘೋಷಣೆ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ.
ಸೂಪರಸ್ಟಾರ್ ರಜನಿಕಾಂತ್ ಈ ಹಿಂದೆ 2017ರ ಡಿಸೆಂಬರ್ 31ರಂದು ರಜನಿ ಮಕ್ಕಳ್ ಮಂದ್ರಮ್ ನ ಘೋಷಣೆ ಮಾಡಿದ್ದರು. ಅದಾದ ಎರಡು ವರ್ಷದ ನಂತರ ಮತ್ತೆ ಚಟುವಟಿಕೆಯಿಂದಿರಲು ಯೋಚಿಸಿದ್ದಾರಂತೆ.
ಈ ಹಿಂದೆ ಬಿಜೆಪಿಯತ್ತ ಸೂಪರಸ್ಟಾರ ವಾಲುತ್ತಿದ್ದಾರೆಂಬ ವದಂತಿಗಳು ಹಬ್ಬಿದ್ದವು. ಈಗ ಅದನ್ನ ಮೀರಿದ ಯತ್ನಗಳು ತಲೈವಾನಿಂದ ನಡೆಯುತ್ತಿದೆ ಎಂದು ಆಪ್ತ ವಲಯಗಳು ತಿಳಿಸಿವೆ.