ರೈತ ಸಂಘಕ್ಕೂ “ಆಕೆ”ಗೂ ಸಂಬಂಧವೇಯಿಲ್ಲ: ‘ಆಕೆ’ ಧಾರವಾಡದ ಅಧ್ಯಕ್ಷೆಯೂ ಅಲ್ವಂತೆ..
ಬೆಂಗಳೂರು: ಸರಕಾರ ಮತ್ತು ಸಚಿವರ ಬಗ್ಗೆ ಆಕ್ರೋಶದ ಧ್ವನಿಯಲ್ಲಿ ಮನಸೋ ಇಚ್ಚೆ ಮಾತಾಡಿದ್ದ ಮಂಜುಳಾ ಪೂಜಾರ ಧಾರವಾಡ ಜಿಲ್ಲೆಯಾಗಲಿ, ಹಾವೇರಿ ಜಿಲ್ಲೆಯ ರೈತ ಸಂಘಕ್ಕೆ ಯಾವುದೇ ಸಂಬಂಧವಿಲ್ಲಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ಹೇಳಿದ್ದಾರೆ.
ಮಂಜುಳಾ ಪೂಜಾರ ಬಗ್ಗೆ ಹೇಳಿದ್ದೇನು.. ಇಲ್ಲಿದೆ ನೋಡಿ..
ಮೂಲತಃ ಹಾವೇರಿ ಮಂಜುಳಾ ಪೂಜಾರ, ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತೀವ್ರ ಥರವಾಗಿ ಮನಬಂದಂತೆ ಮಾತಾಡಿದ್ದು, ರೈತರಲ್ಲಿಯೂ ಬೇಸರ ಮೂಡಿಸಿದೆ. ಹೀಗಾಗಿ, ಮಂಜುಳಾ ಪೂಜಾರ ರೈತ ಸಂಘಕ್ಕೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸಚಿವ ಬಿ.ಸಿ.ಪಾಟೀಲ ಪುತ್ರಿ ಸೃಷ್ಟಿ ಪಾಟೀಲ ಕೂಡಾ, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ರೈತ ಮಹಿಳೆ ಎಂದು ಬಿಂಬಿಸಿಕೊಂಡು ಏಕವಚನದಲ್ಲಿ ರಾಜ್ಯ ಕೃಷಿ ಸಚಿವರನ್ನ ನಿಂದಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ನುಡಿದರೇ ಮುತ್ತಿನ ಹಾರದಂತಿರಬೇಕು..
ನುಣಿದರೇ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೇ ಸ್ಪಟಿಕದ ಶಲಾಕೆಯಂತಿರಬೇಕು
ನುಡಿದರೇ ಲಿಂಗ ಮೆಚ್ಚಿ ಅಹುದೆನಬೇಕು
ನುಡಿಯೊಳಗೆ ನುಡಿಇಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ..? ಎಂದು ಬರೆದುಕೊಂಡಿದ್ದಾರೆ.