“ಹರಿದ ಮೋಡ”ಕ್ಕೆ ಜಿವುಟಿದ ಜೀವನದ “ಮೊಳಕೆ”- ಹೆಂಗಿದೆ ಗೊತ್ತಾ ಧಾರವಾಡದ ಸ್ಥಿತಿ…

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಧಾರವಾಡ ಜಿಲ್ಲೆಯೂ ತತ್ತರಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಜನರು ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರಂತೂ ಅಡುಗೆ ಮಾಡಿಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಹಲವು ಮನೆಗಳು ಬಿದ್ದಿದ್ದು, ವೃದ್ಧರು, ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಕುರಿತ ವೀಡಿಯೋ ಇಲ್ಲಿದೆ ನೋಡಿ..
ಸರಕಾರ ಇಂಥವರಿಗೆ ತಕ್ಷಣವೇ ಗಂಜಿ ಕೇಂದ್ರಗಳನ್ನಾದರೂ ತೆಗೆಯಬೇಕಿದೆ. ಬಡವರ ಬದುಕಿಗೆ ಹರಿದ ಮೋಡ ಕೊಳ್ಳಿಯಿಟ್ಟಿದ್ದು, ಮತ್ತೇನು ಅವಘಡ ಸಂಭವಿಸುತ್ತೋ ಅನ್ನೋ ಆತಂಕದಲ್ಲಿ ಕ್ಷಣ ಕಳೆಯುತ್ತಿದ್ದಾರೆ.