ಮಳೆಗಾಗಿ “ಗುರಜಿ”ಯಾಗಿ ಪ್ರಾರ್ಥನೆ ಮಾಡುತ್ತಿರುವ ಮಕ್ಕಳು…!
1 min readಧಾರವಾಡ: ಮುಂಗಾರು ಮಳೆ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ರೈತನ ಮಕ್ಕಳು ಮನೆ ಮನೆಗೆ ಗುರಜಿಯಾಗಿ ಬೇಡಿಕೊಂಡು, ಮಳೆಯನ್ನ ನೀಡು ದೇವಾ ಎಂದು ಪ್ರಾರ್ಥನೆ ಮಾಡುವುದು ಆರಂಭವಾಗಿದೆ.
ಶಿವಳ್ಳಿ ಗ್ರಾಮದಲ್ಲಿ ಮುಂಗಾರು ಬಿತ್ತನೆಯನ್ನ ಮಾಡಿದ್ದರೂ, ಮಳೆಯಾಗದ ಹಿನ್ನೆಲೆಯಲ್ಲಿ ರೈತರು ತಲೆ ಮೇಲೆ ಕೈ ಹಾಕಿಕೊಂಡು ಕೂಡುವ ಸ್ಥಿತಿ ಬಂದಿದೆ. ನಿರಂತರವಾಗಿ ಸಮಸ್ಯೆಗಳು ಬರುತ್ತಿವೆ ಎಂದು ಮಾತನಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿಯೇ, ರೈತರ ಮಕ್ಕಳು ದೇವರ ಸ್ಮರಣೆಯಲ್ಲಿ ಗುರಜಿಗಳಾಗಿ ಮನೆ ಮನೆಗೆ ಹೋಗಿ, ಮಳೆ ಬರುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಮಕ್ಕಳು ತಲೆಯ ಮೇಲೆ ದೇವಸ್ವರೂಪವನ್ನ ಮಾಡಿಕೊಂಡು, ನೀರನ್ನ ಹಾಕಿಕೊಂಡು ಅಲೆಯುತ್ತಿದ್ದಾರೆ.
ಮಕ್ಕಳ ಕೂಗಾದರೂ ಕೇಳಿ, ಮಳೆರಾಯನ ಆಗಮನವಾಗಲಿ ಎಂಬುದೇ ಪ್ರತಿ ರೈತನ ಕೂಗಾಗಿದೆ. ಇದರಿಂದ ಮುಂಗಾರು ಬೆಳೆ ಉತ್ತಮವಾಗಿ ಬರಲಿ ಎಂಬುದು ಬಯಕೆ.