ಅಳಗವಾಡಿ ಬಳಿಯ ಹಂಚಿನಾಳದಲ್ಲಿ ಸಿಡಿಲು ಬಡಿದು ಇಬ್ಬರ ಸಾವು…!

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಸರಹದ್ದಿಗೆ ಅಂಟಿಕೊಂಡ ಹಂಚಿನಾಳ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಸಾವಿಗೀಡಾದ ಘಟನೆ ನಡೆದಿದೆ.

ಕುರಿ ಮೇಯಿಸುತ್ತಿದ್ದ ಇಬ್ಬರು ಬಾಲಕರು, ಜೋರಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಮರದ ಕೆಳಗೆ ಹೋಗಿ ನಿಂತಾಗ ದುರ್ಘಟನೆ ನಡೆದಿದೆ. ಮೃತಪಟ್ಟ ಇಬ್ಬರು ಗುಡಮ್ಕೇರಿಯವರೆಂದು ಗೊತ್ತಾಗಿದೆ.
ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ ಅವರು, ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಲು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.