“ಚಹಾ” ಮಾರೋ ವೇಷ- ಕಾಲಿ”ಮಿರ್ಜಿ” ಕಾರ್ಯಾಚರಣೆ- ಮಾರೋರ ರಾಬರಿ ಬಯಲು..!
ಹುಬ್ಬಳ್ಳಿ: ನೀವೂ ಟ್ರೇನನಲ್ಲಿ ಹೋಗುತ್ತಿದ್ದರೇ ಚಾ.. ಚಾ.. ಚಾ.. ಎಂದು ಧ್ವನಿಯನ್ನ ಕೇಳಿಯೇ ಇರುತ್ತೀರಿ. ಹಾಗೇ ಬಂದು ಹೋಗುವವರೇ ನಿಮ್ಮ ಬ್ಯಾಗನ್ನೂ ಎಗರಿಸಿ ಹೋಗುತ್ತಿದ್ದರೆಂಬ ಸತ್ಯವನ್ನ ರೇಲ್ವೆ ಪೊಲೀಸರು ಬಯಲು ಮಾಡಿದ್ದು, ಆರೋಪಿಗಳಿಬ್ಬರನ್ನ ಬಂಧನ ಮಾಡಿದ್ದಾರೆ.
ಚಲಿಸುವ ರೇಲ್ವೆಯಲ್ಲಿ ಚಹಾ ಮಾರಾಟ ಮಾಡುತ್ತಲೇ ಮಹಿಳೆಯರನ್ನ ಬ್ಯಾಗನ್ನ ಕದ್ದು ಹೊರಗೆ ಎಸೆದು ಕಳ್ಳತನ ಮಾಡುತ್ತಿದ್ದ ಮಂಟೂರ ರಸ್ತೆಯ ಯೋಹಾನಕುಮಾರ ಪ್ರಾನ್ಸಿಸ್ ಕೂಂದರ್ತಿ ಹಾಗೂ ಪ್ರೇಮಕುಮಾರ ಅಲಿಯಾಸ್ ಚಿಂಟುವನ್ನ ಬಂಧನ ಮಾಡಲಾಗಿದೆ.
ಬಂಧಿತರಿಂದ ಸುಮಾರು ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಚಾಲಾಕಿ ಕಳ್ಳರು, ಮಹಿಳೆಯರ ಬ್ಯಾಗನ್ನ ಕದ್ದು ಹೊರಗೆ ಒಗೆದು ಆ ಜಾಗವನ್ನ ಗುರುತು ಮಾಡಿಕೊಳ್ಳುತ್ತಿದ್ದರು. ನಂತರ ಮುಂಬರುವ ನಿಲ್ದಾಣದಲ್ಲಿಳಿದು ನಡೆದುಕೊಂಡು ಬಂದು ಬ್ಯಾಗಿನಲ್ಲಿದ್ದ ಎಲ್ಲವನ್ನೂ ದೋಚಿ, ಬ್ಯಾಗನ್ನ ಅಲ್ಲಿಯೇ ಒಗೆದು ಹೋಗುತ್ತಿದ್ದರು.
ರೇಲ್ವೆ ಠಾಣೆಯ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ, ಪಿಎಸೈ ಎಂ.ಸತ್ಯಪ್ಪ, ಸಿಬ್ಬಂದಿಗಳಾದ ಪ್ರವೀಣ ಪಾಟೀಲ, ರಮೇಶ ಲಮಾಣಿ, ಸುಭಾಸ ದಳವಾಯಿ, ರಮೇಶಕುಮಾರ ಕಟಗಿ, ಸುಭಾಸ ದಳವಾಯಿ, ರಾಯಪ್ಪ ಗುಂಡಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.